ನವದೆಹಲಿ: ‘ಕೋವಿಡ್–19’ನಿಂದಾಗಿ ಆದಾಯದಲ್ಲಿ ನಷ್ಟವಾಗಿದೆ ಎಂದುದೇಶದ ದುಡಿಯುವ ವರ್ಗದಲ್ಲಿ ಶೇ 80ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದು, ಭವಿಷ್ಯದ ಜೀವನವು ಕಷ್ಟದಿಂದ ಕೂಡಿರಲಿದೆ ಎಂದು ಶೇ 90ರಷ್ಟು ಮಂದಿ ಹೇಳಿದ್ದಾರೆ.

ವಿಮೆ ಮತ್ತು ಸಂಪತ್ತು ನಿರ್ವಹಣೆಯ ಜಾಗತಿಕ ಕಂಪನಿ ‘ಜನರಾಲಿ ಗ್ರೂಪ್’ ನಡೆಸಿದ ಸಮೀಕ್ಷೆಯಿಂದ ಈ ಮಾಹಿತಿ ತಿಳಿದುಬಂದಿದೆ. 22 ದೇಶಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿದೆ.

ಕೆಲವೇ ತಿಂಗಳುಗಳಲ್ಲಿ ತಮ್ಮ ಆದಾಯದಲ್ಲಿ ಅರ್ಧದಷ್ಟು ಕಳೆದುಕೊಳ್ಳುವುದಾಗಿ ಸ್ವ–ಉದ್ಯೋಗದಲ್ಲಿ ತೊಡಗಿಕೊಂಡಿರುವವರು ಹೇಳಿದ್ದಾರೆ.

‘ಕೋವಿಡ್–19’ ಪಿಡುಗಿನ ಕಾರಣಕ್ಕೆ ಜನರು ಭವಿಷ್ಯದ ಬಗ್ಗೆ ಭಯ ಮತ್ತು ಆತಂಕ ಹೊಂದಿದ್ದಾರೆ. ಬಹಳಷ್ಟು ಜನರು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ಕುರಿತು ಅನುಮಾನ ಹೊಂದಿದ್ದು, ಪ್ರತಿ ಹಂತದಲ್ಲಿಯೂ ಆರ್ಥಿಕ ನಷ್ಟವಾಗುವ ಭಯದಲ್ಲಿದ್ದಾರೆ.

ಭಾರತದಲ್ಲಿ ಅರ್ಧದಷ್ಟು ಜನರು ಮನೆಯಿಂದ ಕೆಲಸ ಮಾಡುತ್ತಿದ್ದು, ಮುಂದಿನ ಕೆಲವು ತಿಂಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ನಿರೀಕ್ಷೆ ಮಾಡಿದ್ದಾರೆ.

80%:ಆದಾಯ ನಷ್ಟವಾಗಲಿದೆ ಎಂದು ನಿರೀಕ್ಷಿಸಿದವರು
90%:ಭವಿಷ್ಯದ ಜೀವನ ಕಷ್ಟದಿಂದ ಕೂಡಿರಲಿದೆ ಎನ್ನುವ ಆತಂಕ ತಳೆದವರು
53%:ಸರ್ಕಾರದಿಂದ ನೆರವು ಬಯಸಿರುವವರು
39%:ಕುಟುಂಬದ ಸದಸ್ಯರು ನೆರವಾಗಲಿದ್ದಾರೆ ಎಂದು ಭಾವಿಸಿರುವವರು
40%:ಕಂಪನಿಗಳು ನೆರವಾಗುವ ನಿರೀಕ್ಷೆಯಲ್ಲಿ ಇರುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.