ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಅಡವಿಟ್ಟು ಪಡೆದಿದ್ದ $ 2.15 ಬಿಲಿಯನ್ ಸಾಲ ತೀರಿಸಿದ ಅದಾನಿ ಸಮೂಹ

ಅಂಬುಜಾ ಸಿಮೆಂಟ್ ಸ್ವಾಧೀನದ ವೇಳೆ ಪಡೆದುಕೊಂಡ $500 ಮಿಲಿಯನ್‌ ಕೂಡ ಮರುಪಾವತಿ
Last Updated 13 ಮಾರ್ಚ್ 2023, 2:43 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕ ಮೂಲಕ ಶಾರ್ಟ್‌ ಸೆಲ್ಲಿಂಗ್‌ ಕಂಪನಿ ಹಿಂಡನ್‌ಬರ್ಗ್‌ ವರದಿಯಿಂದ ಉಂಟಾಗಿರುವ ಹಾನಿ ಬಳಿಕ, ತನ್ನ ಷೇರುಗಳ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಗಳಿಸುವ ಸಲುವಾಗಿ ಅದಾನಿ ಸಮೂಹವು ಸುಮಾರು 2.15 ಬಿಲಿಯನ್‌ ಡಾಲರ್‌ ಸಾಲವನ್ನು ಮರುಪಾವಾತಿ ಮಾಡಿರುವುದಾಗಿ ಭಾನುವಾರ ಹೇಳಿಕೊಂಡಿದೆ.

ಮಾರ್ಚ್‌ 31ರ ಒಳಗಾಗಿ ಸಂಪೂರ್ಣ ಸಾಲ ಮಾರುಪಾವತಿ ಯೋಜನೆಯನ್ನು ಅದಾನಿ ಸಮೂಹವು ಹಾಕಿಕೊಂಡಿದ್ದು, ಇದರ ಭಾಗವಾಗಿ ಇಷ್ಟು ಮೊತ್ತದ ಸಾಲವನ್ನು ಮರುಪಾವತಿ ಮಾಡಿದೆ.

ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅದಾನಿ ಸಮೂಹವು, ಷೇರುಗಳನ್ನು ಅಡವಿಟ್ಟು ಪಡೆಯಲಾಗಿದ್ದ 2.15 ಬಿಲಿಯನ್‌ ಡಾಲರ್ ಸಾಲವನ್ನು ಮರುಪಾವತಿ ಮಾಡಿರುವುದಾಗಿ ಹೇಳಿದೆ. ಅಲ್ಲದೇ ಅಂಬುಜಾ ಸಿಮೆಂಟ್‌ ಸ್ವಾಧೀನಕ್ಕೆ ಪಡೆಯಲಾಗಿದ್ದ 500 ಮಿಲಿಯನ್ ಡಾಲರ್‌ ಸಾಲವನ್ನೂ ಪಾವತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಷೇರು ಅಡವಿಟ್ಟು ‍ಪಡೆಯಲಾಗಿದ್ದ ಸುಮಾರು ₹ 7,374 ಕೋಟಿ ಸಾಲವನ್ನು ಪಾವತಿ ಮಾಡಿದ್ದಾಗಿ ಅದಾನಿ ಸಮೂಹ ಹೇಳಿಕೊಂಡಿತ್ತು.

ಸದ್ಯ ಪಾವತಿ ಮಾಡಿರುವ ಸಾಲದ ಹಣದ ಮೂಲ ಯಾವುದು ಎಂದು ಅದಾನಿ ಸಮೂಹವು ಸ್ಪಷ್ಟಪಡಿಸಿಲ್ಲ.

2.65 ಬಿಲಿಯನ್‌ ಡಾಲರ್‌ ಸಾಲ ಮರುಪಾವತಿ ಪ್ರಕ್ರಿಯೆಯು ಆರು ತಿಂಗಳಿನಲ್ಲಿ ಪೂರ್ಣಗೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT