ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಂಡ ಅದಾನಿ ಷೇರು

ಸೆನ್ಸೆಕ್ಸ್‌ 335, ನಿಫ್ಟಿ 148 ಅಂಶ ಏರಿಕೆ
Published 14 ಮಾರ್ಚ್ 2024, 15:34 IST
Last Updated 14 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ 10 ಕಂಪನಿಗಳ ಷೇರಿನ ಮೌಲ್ಯ ಗುರುವಾರದ ವಹಿವಾಟಿನಲ್ಲಿ ಏರಿಕೆಯಾಗಿದೆ.

ಅದಾನಿ ಟೋಟಲ್‌ ಗ್ಯಾಸ್‌ ಶೇ 11.34, ಅದಾನಿ ಎನರ್ಜಿ ಸಲ್ಯೂಷನ್ಸ್‌ ಶೇ 11.10, ಅದಾನಿ ಗ್ರೀನ್‌ ಎನರ್ಜಿ ಶೇ 9.66, ಅದಾನಿ ಎಂಟರ್‌ಪ್ರೈಸಸ್‌ ಶೇ 6.29, ಅದಾನಿ ಪೋರ್ಟ್ಸ್‌ ಶೇ 4.93, ಎನ್‌ಡಿಟಿವಿ ಶೇ 4.82, ಅದಾನಿ ವಿಲ್ಮರ್‌ ಶೇ 4.40, ಎಸಿಸಿ ಶೇ 4.11, ಅಂಬುಜಾ ಸಿಮೆಂಟ್ಸ್‌ ಶೇ 4.04 ಮತ್ತು ಅದಾನಿ ಪವರ್‌ ಶೇ 1.81ರಷ್ಟು ಷೇರಿನ ಮೌಲ್ಯ ಹೆಚ್ಚಳ ಆಗಿದೆ.

10 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ₹15.66 ಲಕ್ಷ ಕೋಟಿಗೆ ಮುಟ್ಟಿದೆ. ಬುಧವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಷೇರಿನ ಮೌಲ್ಯವು ಕುಸಿದಿತ್ತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ ₹1.12 ಲಕ್ಷ ಕೋಟಿ ಕರಗಿತ್ತು.

ಷೇರು ಸೂಚ್ಯಂಕಗಳು ಚೇತರಿಕೆ:

ಐ.ಟಿ ಮತ್ತು ಬಂಡವಾಳ ಸರಕುಗಳ ಷೇರು ಖರೀದಿಯಿಂದ ಷೇರು ಸೂಚ್ಯಂಕಗಳು ಗುರುವಾರ ಏರಿಕೆ ಕಂಡಿವೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹7.81 ಲಕ್ಷ ಕೋಟಿ ವೃದ್ಧಿಯಾಗಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 335 ಅಂಶ ಏರಿಕೆಯಾಗಿ, 73,097ಕ್ಕೆ ಸ್ಥಿರಗೊಂಡಿತು. ದಿನ‌ದ ವಹಿವಾಟಿನಲ್ಲಿ ಇದು 73,364ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 148 ಅಂಶ ಹೆಚ್ಚಳವಾಗಿ 22,146ಕ್ಕೆ ಕೊನೆಗೊಂಡಿತು. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹379 ಲಕ್ಷ ಕೋಟಿಗೆ ಮುಟ್ಟಿದೆ. 

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಲಾರ್ಸೆನ್‌ ಆ್ಯಂಡ್‌ ಟೂಬ್ರೊ, ಇನ್ಫೊಸಿಸ್‌, ವಿಪ್ರೊ, ಭಾರ್ತಿ ಏರ್‌ಟೆಲ್‌, ಮಹೀಂದ್ರ ಆ್ಯಂಡ್‌ ಮಹಿಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಮತ್ತು ಏಷ್ಯನ್‌ ಪೇಂಟ್ಸ್‌ ಷೇರಿನ ಮೌಲ್ಯ ಏರಿಕೆ ಆಗಿದೆ. ಎಕ್ಸಿಸ್‌ ಬ್ಯಾಂಕ್‌, ಇಂಡಸ್ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಎಸ್‌ಬಿಐ ಮತ್ತು ಟಾಟಾ ಸ್ಟೀಲ್‌ನ ಷೇರಿನ ಮೌಲ್ಯ ಇಳಿದಿದೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 3.11 ಮತ್ತು ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 2.28ರಷ್ಟು ಏರಿಕೆ ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT