ನವದೆಹಲಿ: ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಷೇರು ಮಾರಾಟದ ಮೂಲಕ ₹20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಸಮೂಹದ ಎರಡು ಕಂಪನಿಗಳ ಆಡಳಿತ ಮಂಡಳಿಗಳು ಶನಿವಾರ ಸಭೆ ಸೇರಲಿದ್ದು, ಈ ಕುರಿತು ತೀರ್ಮಾನ ಕೈಗೊಳ್ಳಲಿವೆ.

‘ಅದಾನಿ ಎಂಟರ್ಪ್ರೈಸಸ್ನ ಆಡಳಿತ ಮಂಡಳಿ ಸಭೆಯು ಷೇರು ಮಾರಾಟ ಮೂಲಕ ಬಂಡವಾಳ ಸಂಗ್ರಹಿಸುವ ಬಗ್ಗೆ ಪರಿಶೀಲನೆ ನಡೆಸಿ, ಅನುಮೋದನೆ ನೀಡಲಿದೆ’ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕೂಡ ಇದೇ ಬಗೆಯ ಮಾಹಿತಿಯನ್ನು ಷೇರುಪೇಟೆಗೆ ನೀಡಿದೆ. ಆದರೆ, ನಿರ್ದಿಷ್ಟವಾಗಿ ಎಷ್ಟು ಬಂಡವಾಳ ಸಂಗ್ರಹಿಸುವ ಉದ್ದೇಶ ಇದೆ ಎಂಬುದನ್ನು ಎರಡೂ ಕಂಪನಿಗಳು ತಿಳಿಸಿಲ್ಲ.

ಸಮೂಹವು ಗರಿಷ್ಠ ₹20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿರಬಹುದು ಎಂದು ಮೂಲಗಳು ಹೇಳಿವೆ. ಮಧ್ಯಪ್ರಾಚ್ಯ ಹಾಗೂ ಯುರೋಪಿನ ಹೂಡಿಕೆದಾರರು, ಹೆಚ್ಚು ಹಣ ತೊಡಗಿಸಲು ಆಸಕ್ತಿ ತೋರಿಸಿದ್ದಾರೆ ಎಂದು ಗೊತ್ತಾಗಿದೆ.

ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಎಫ್ಪಿಒ ಮೂಲಕ ₹20 ಸಾವಿರ ಕೋಟಿ ಸಂಗ್ರಹಿಸಲು ಮೂರು ತಿಂಗಳ ಹಿಂದೆ ಯತ್ನಿಸಿತ್ತು. ಎಫ್ಪಿಒ ಮೂಲಕ ಮಾರಾಟಕ್ಕೆ ಇರಿಸಿದ್ದ ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿತ್ತಾದರೂ, ಕಂಪನಿಯು ಹಿಂಡನ್ಬರ್ಗ್ ರಿಸರ್ಚ್ನ ವರದಿ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಸಮೂಹ ಅಲ್ಲಗಳೆದಿದೆ. ಈಗ ಸಮೂಹವು ಹೂಡಿಕೆದಾರರು ಮತ್ತು ಮಾರುಕಟ್ಟೆಯ ವಿಶ್ವಾಸವನ್ನು ಮರಳಿ ಗಳಿಸಲು ರೋಡ್ಶೋಗಳನ್ನು ಆಯೋಜಿಸುತ್ತಿದೆ, ಸಾಲಗಳನ್ನು ಅವಧಿಗೆ ಮೊದಲೇ ಮರುಪಾವತಿ ಮಾಡುತ್ತಿದೆ. ಈಗ ಸಮೂಹವು ಸಂಗ್ರಹಿಸಲು ಉದ್ದೇಶಿಸಿರುವ ಬಂಡವಾಳವನ್ನು ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.