ಮಂಗಳವಾರ, ಅಕ್ಟೋಬರ್ 26, 2021
21 °C
21 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ

₹4,445 ಕೋಟಿ ವೆಚ್ಚದಲ್ಲಿ ಏಳು ಜವಳಿ ಪಾರ್ಕ್‌ ಸ್ಥಾಪನೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ, ₹ 4,445 ಕೋಟಿ ವೆಚ್ಚದಲ್ಲಿ ಏಳು ಬೃಹತ್‌ ಜವಳಿ (ಪಿಎಂ ಮಿತ್ರ) ಪಾರ್ಕ್‌ ಸ್ಥಾಪಿಸಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಇದರಿಂದ ನೇರವಾಗಿ ಏಳು ಲಕ್ಷ ಹಾಗೂ ಪರೋಕ್ಷವಾಗಿ 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಪಾರ್ಕ್‌ಗಳನ್ನು ಸ್ಥಾಪಿಸುವುದಾಗಿ 2021–22ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಹೊಲದಿಂದ ನೂಲು (ಫಾರ್ಮ್‌ ಟು ಫೈಬರ್‌), ನೂಲಿನಿಂದ ಕಾರ್ಖಾನೆ, (ಫೈಬರ್‌ ಟು ಫ್ಯಾಕ್ಟರಿ), ಕಾರ್ಖಾನೆ
ಯಿಂದ ಫ್ಯಾಶನ್‌ (ಫ್ಯಾಕ್ಟರಿಯಿಂದ ಫ್ಯಾಶನ್‌) ಹಾಗೂ ಫ್ಯಾಶನ್‌ ಟು ಫಾರಿನ್‌  ಎಂಬ ಐದು ‘ಎಫ್’ ಸೂತ್ರದ ಆಧಾರದಲ್ಲಿ ಈ ಪಾರ್ಕ್‌ಗಳ ನಿರ್ಮಾಣ ಆಗಲದಿಎ. ಇವು ಜವಳಿ ಉದ್ಯಮದ ಹೆಚ್ಚಿನ ಅಭಿವೃದ್ಧಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.‌

ಆಸಕ್ತ ರಾಜ್ಯಗಳಲ್ಲಿನ ಅಭಿವೃದ್ಧಿಪಡಿಸಿಲ್ಲದ ಹಾಗೂ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ (ಗ್ರೀನ್‌ಫೀಲ್ಡ್‌ ಹಾಗೂ ಬ್ರೌನ್‌ಫೀಲ್ಡ್‌) ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಈಗಾಗಲೇ ಹತ್ತು ರಾಜ್ಯಗಳು ಪಾರ್ಕ್‌ ಸ್ಥಾಪನೆಗೆ ಆಸಕ್ತಿ ವ್ಯಕ್ತಪಡಿಸಿದ್ದು, ವಸ್ತುನಿಷ್ಠ ಮಾನದಂಡ ಅನುಸರಿಸಿ ಆಯ್ಕೆ ಮಾಡಲಾಗುವುದು. ‘ಹೊಲದಿಂದ ವಿದೇಶಕ್ಕೆ’–  ತಯಾರಿಕೆಯಿಂದ ರಫ್ತು ಮಾಡುವವರೆಗಿನ ಸರಪಳಿಯು ಒಂದೇ ಕಡೆ ಇರುವುದರಿಂದ, ಜವಳಿ ಉದ್ಯಮದ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು