ಮುಂಬೈ: ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ಕಂಪನಿಯು ಏರ್ ಬಸ್ ಮತ್ತು ಬೋಯಿಂಗ್ ಕಂಪನಿಗಳೊಂದಿಗೆ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ವರ್ಷ ಬರಲಿರುವ 470 ವಿಮಾನಗಳನ್ನು ಚಲಾಯಿಸಲು ಏರ್ ಇಂಡಿಯಾಗೆ 6,500 ಪೈಲಟ್‌ಗಳ ಅಗತ್ಯವಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ವಿಮಾನಗಳ ಸಿಬ್ಬಂದಿ ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸಲು ಏರ್ ಇಂಡಿಯಾ ಕಂಪನಿಯು ಒಟ್ಟು 840 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ 470 ವಿಮಾನಗಳನ್ನು ಖರೀದಿಸುವುದು ಖಚಿತವಾಗಿದ್ದು, ಉಳಿದ 370 ವಿಮಾನಗಳ ಖರೀದಿಯನ್ನು ಕಂಪನಿಯು ಆಯ್ಕೆಯಾಗಿ ಇರಿಸಿಕೊಂಡಿದೆ.
ಪ್ರಸುತ್ತ ಏರ್ ಇಂಡಿಯಾ ಸಂಸ್ಥೆಯು ತನ್ನ 113 ವಿಮಾನಗಳ ಕಾರ್ಯಾಚರಣೆಗೆ 1,600 ಮಂದಿ ಪೈಲಟ್‌ಗಳನ್ನು ಹೊಂದಿದ್ದು, ಅತಿ ದೀರ್ಘಾವಧಿಯ ವಿಮಾನಗಳ ಹಾರಾಟವು ಸಿಬ್ಬಂದಿ ಕೊರತೆಯಿಂದಾಗಿ ಕೆಲವೊಂದು ಬಾರಿ ತಡವಾದರೆ, ಕೆಲವು ಬಾರಿ ರದ್ದುಗೊಳ್ಳುತ್ತಿವೆ.
ಏರ್ ಬಸ್ ಕಂಪನಿಯು 210 –ಎ320/321 ನಿಯೊ/ಎಕ್ಸ್ಎಲ್‌ಆರ್ ಮತ್ತು 40– ಎ350–900/1000 ಹೆಸರಿನ ವಿಮಾನಗಳನ್ನು ಪೂರೈಸಲಿದ್ದು, ಬೋಯಿಂಗ್ ಕಂಪನಿಯಿಂದ 190– 737–ಮ್ಯಾಕ್ಸ್, 20– 787ಎಸ್ ಮತ್ತು 10– 777s ವಿಮಾನಗಳು ಏರ್ ಇಂಡಿಯಾಗೆ ಪೂರೈಕೆಯಾಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.