ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ತರಂಗಾಂತರ ಖರೀದಿಗೆ ಸಂಬಂಧಿಸಿದ ಬಾಕಿ ಮೊತ್ತ ₹8,465 ಕೋಟಿಯನ್ನು ಅವಧಿಗೆ ಮೊದಲೇ ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿದೆ.
2016ರಲ್ಲಿ ನಡೆದಿದ್ದ ತರಂಗಾಂತರ ಹರಾಜಿಗೆ ಸಂಬಂಧಿಸಿದಂತೆ ಈ ಬಾಕಿ ಮೊತ್ತ ಪಾವತಿಸಿದೆ. ಕಂತನ್ನು ಶೇ 9.3ರ ಬಡ್ಡಿದರದ ಜೊತೆಗೆ ಪಾವತಿಸಲಾಗಿದೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.