ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಅಲಹಾಬಾದ್, ಇಂಡಿಯನ್‌ ಬ್ಯಾಂಕ್‌ ವಿಲೀನ ತುಸು ವಿಳಂಬ ಸಾಧ್ಯತೆ

Last Updated 28 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ದೇಶದಾದ್ಯಂತ 21 ದಿನಗಳವರೆಗೆ ಲಾಕ್‌ಡೌನ್‌ ಮಾಡಿರುವುದರಿಂದಇಂಡಿಯನ್‌ ಬ್ಯಾಂಕ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ ವಿಲೀನ ಪ್ರಕ್ರಿಯೆ ತುಸು ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ನಿಗದಿಪಡಿಸಿರುವಂತೆ ಏಪ್ರಿಲ್‌ 1 ರಿಂದ ನಗದು ಠೇವಣಿ ಇಡುವುದು, ಹಿಂದಕ್ಕೆ ಪಡೆಯುವುದು, ವರ್ಗಾವಣೆಯಂತಹ ವಹಿವಾಟಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದೂ ಹೇಳಿದ್ದಾರೆ.

ವಿಲೀನ ಒಪ್ಪಂದದಂತೆ ಇಂಡಿಯನ್ ಬ್ಯಾಂಕ್‌ನ 115 ಷೇರುಗಳನ್ನು ಅಲಹಾಬಾದ್‌ ಬ್ಯಾಂಕ್‌ನ ‍ಪ್ರತಿ 1,000 ಷೇರಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು.

ಅಲಹಾಬಾದ್‌ನ ಲೊಗೊವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಕೇಂದ್ರ ಕಚೇರಿಯನ್ನು ಬೇರೆ ಕಡೆಗೆ
ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಲೀನದ ಬಳಿಕ ವಹಿವಾಟಿನ ಒಟ್ಟು ಮೊತ್ತ ₹ 8.40 ಲಕ್ಷ ಕೋಟಿಗಳಷ್ಟಿರಲಿದೆ. ಎಲ್ಲಾ ಸಿಬ್ಬಂದಿಯನ್ನೂ ಮುಂದುವರಿಸಲಾಗುವುದು. ಇಂಡಿಯನ್ ಬ್ಯಾಂಕ್‌ನ ಹಾಲಿ ಎಂಡಿ ಮತ್ತು ಸಿಇಒ ಅವರೇ ಹೊಸ ಬ್ಯಾಂಕ್‌ನ ಮುಖ್ಯಸ್ಥರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT