ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಬಿ ಆದೇಶ: ಕಾನೂನು ಹೋರಾಟಕ್ಕೆ ಅನಿಲ್‌ ಅಂಬಾನಿ ನಿರ್ಧಾರ

Published : 25 ಆಗಸ್ಟ್ 2024, 15:12 IST
Last Updated : 25 ಆಗಸ್ಟ್ 2024, 15:12 IST
ಫಾಲೋ ಮಾಡಿ
Comments

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಆದೇಶ ಕುರಿತು ಉದ್ಯಮಿ ಅನಿಲ್ ಅಂಬಾನಿ ಅವರು ಪರಾಮರ್ಶೆ ನಡೆಸುತ್ತಿದ್ದಾರೆ. ಸೆಬಿ ವಿಧಿಸಿರುವ ದಂಡ ಹಾಗೂ ನಿಷೇಧ ಕುರಿತಂತೆ ಕಾನೂನು ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅನಿಲ್‌ ಅಂಬಾನಿ ಅವರ ವಕ್ತಾರರು ಭಾನುವಾರ ತಿಳಿಸಿದ್ದಾರೆ. 

ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ನಿಂದ (ಆರ್‌ಎಚ್‌ಎಫ್‌ಎಲ್‌) ಬೇರೆಡೆಗೆ ಹಣ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಅನಿಲ್‌ ಅಂಬಾನಿ ಮತ್ತು ಇತರೆ 24 ಕಂಪನಿಗಳಿಗೆ ಷೇರುಪೇಟೆಯಿಂದ ಸೆಬಿಯು ಐದು ವರ್ಷ ನಿರ್ಬಂಧ ವಿಧಿಸಿದೆ. ಅನಿಲ್‌ ಅಂಬಾನಿಗೆ ₹25 ಕೋಟಿ ದಂಡ ಕೂಡ ವಿಧಿಸಲಾಗಿದೆ.

ಆರ್‌ಎಚ್‌ಎಫ್‌ಎಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಫೆಬ್ರುವರಿ 11ರಂದು ಸೆಬಿ ಮಧ್ಯಂತರ ಆದೇಶ ನೀಡಿತ್ತು. ಇದರ ಅನ್ವಯ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಮತ್ತು ರಿಲಯನ್ಸ್ ಪವರ್‌ ಲಿಮಿಟೆಡ್‌ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಆದೇಶ ಪಾಲಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.‌

ಐದು ವರ್ಷದ ವರೆಗೆ ಯಾವುದೇ ನೋಂದಾಯಿತ ಕಂಪನಿ ಅಥವಾ ಸೆಬಿಯಿಂದ ನೋಂದಣಿ ಆಗಿರುವ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ (ಕೆಎಂಪಿ) ಕೆಲಸ ಮಾಡದಂತೆಯೂ ಅನಿಲ್‌ ಅಂಬಾನಿಗೆ ನಿರ್ಬಂಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT