ಮುಂಬೈ (ಪಿಟಿಐ): ಮುಂಗಾರು ಮತ್ತು ಹಿಂಗಾರು ಬೆಳೆಗಳ ಫಸಲು ಹೆಚ್ಚಿದೆ. ಹೀಗಾಗಿ ಗೋಧಿ ಹೊರತುಪಡಿಸಿ ಪ್ರಮುಖ ಆಹಾರ ಬೆಳೆಗಳ ಸರಾಸರಿ ಮಾರುಕಟ್ಟೆ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್ಪಿ) ಕಡಿಮೆ ಇದೆ ಎಂದು ಆರ್ಬಿಐನ ಬುಲೆಟಿನ್ ತಿಳಿಸಿದೆ.

ಕೇಂದ್ರ ಸರ್ಕಾರವು 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಈ ಪೈಕಿ 14 ಮುಂಗಾರು, 7 ಹಿಂಗಾರು ಮತ್ತು ಎರಡು ವಾಣಿಜ್ಯ ಬೆಳೆಗಳಾಗಿವೆ. ಆಹಾರ ಭದ್ರತೆ ಕಲ್ಪಿಸುವ ಉದ್ದೇಶದಿಂದ ಗೋಧಿ, ಅಕ್ಕಿ ಸೇರಿ ಕೆಲವು ಧಾನ್ಯಗಳನ್ನು ಮಾತ್ರ ಸರ್ಕಾರ ಖರೀದಿಸುತ್ತಿದೆ.

ಅಡುಗೆ ಎಣ್ಣೆ ದರದಲ್ಲಿ ಏರಿಳಿತವಿದೆ. ಸೋಯಾ, ಸೂರ್ಯಕಾಂತಿ ಮತ್ತು ಸಾಸಿವೆ ಎಣ್ಣೆ ದರ ಏರುಗತಿಯಲ್ಲಿದ್ದರೆ, ತಾಳೆ ಮತ್ತು ಶೇಂಗಾ ಎಣ್ಣೆ ದರ ಇಳಿಕೆಯಾಗಿದೆ. ದ್ವಿದಳ ಧಾನ್ಯಗಳು ಮತ್ತು ಈರುಳ್ಳಿ ದರ ಇಳಿದಿದೆ. ಆಲೂಗಡ್ಡೆ ಮತ್ತು ಟೊಮೆಟೊ ಬೆಲೆ ಏರಿಕೆಯಾಗಿದೆ ಎಂದು ಆರ್ಬಿಐ ಬುಲೆಟಿನ್ನಲ್ಲಿ ಪ್ರಕಟವಾಗಿರುವ ಲೇಖನ ಗುರುವಾರ ತಿಳಿಸಿದೆ.

ಸಮೃದ್ಧ ಫಸಲು ಮತ್ತು ಸರ್ಕಾರದ ಆಹಾರ ಹಣದುಬ್ಬರ ನಿಯಂತ್ರಣ ಕ್ರಮದಿಂದ ಪ್ರಮುಖ ಆಹಾರ ಬೆಳೆಗಳ ಬೆಲೆಗಳು ಕಡಿಮೆಯಾಗಿವೆ. ಇದು ದೇಶದ ಆಹಾರ ಭದ್ರತೆಯ ವೆಚ್ಚದ ಮೇಲಿನ ಹೊರೆ ಕಡಿಮೆಯಾಗಬಹುದು ಎಂದು ಹೇಳಿದೆ.

ಏಪ್ರಿಲ್ 1ರಿಂದ ಮೇ 19ರ ವರೆಗಿನ ಮಾರುಕಟ್ಟೆ ದರವನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶವು ಪ್ರತಿ ಕ್ವಿಂಟಲ್ ಗೋಧಿಗೆ ಕ್ರಮವಾಗಿ ಎಂಎಸ್ಪಿ ಮೇಲೆ ಹೆಚ್ಚುವರಿ ₹150 ಮತ್ತು ₹175 ನೀಡಿವೆ. ಈ ಅವಧಿಯಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿದೆ. ಈ ಬಾರಿ ಮಳೆಯು ಮೊದಲೇ ಆರಂಭವಾಗಿದೆ. ಪ್ರಮುಖ ರಸಗೊಬ್ಬರಗಳಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆ ಹೆಚ್ಚಿರಲಿದೆ ಎಂದು ವರದಿ ಅಂದಾಜಿಸಿದೆ.

ಈ ವರದಿಯು ಲೇಖಕರ ಅಭಿಪ್ರಾಯವೇ ಹೊರತು, ತನ್ನ ನಿಲುವು ಅಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.