ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಎಟಿಎಂ ವಿತ್‌ಡ್ರಾ, ಚೆಕ್‌ ಬುಕ್ ಶುಲ್ಕ ಪರಿಷ್ಕರಣೆ

Last Updated 26 ಮೇ 2021, 11:23 IST
ಅಕ್ಷರ ಗಾತ್ರ

ನವದೆಹಲಿ: ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆದಾರರು (ಬಿಎಸ್‌ಬಿಡಿ) ಎಟಿಎಂನಿಂದ, ಬ್ಯಾಂಕ್ ಶಾಖೆಗಳಿಂದ ಹಣ ಪಡೆಯಲು ಮತ್ತು ಚೆಕ್‌ ಪುಸ್ತಕ ಪಡೆಯಲು ಇರುವ ನಿಯಮವನ್ನು ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಪರಿಷ್ಕರಿಸಿದೆ. ಇದು ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಪರಿಷ್ಕೃತ ನಿಯಮ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಎಟಿಎಂ, ಶಾಖೆಯಿಂದ ಹಣ ಪಡೆದರೆ ಶುಲ್ಕವೆಷ್ಟು?

ಎಸ್‌ಬಿಐ ಪ್ರಕಟಣೆಯ ಪ್ರಕಾರ, ಎಟಿಎಂ ಮತ್ತು ಶಾಖೆಗಳಿಂದ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ಹಣ ಪಡೆದರೆ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಎಸ್‌ಬಿಐ ಎಟಿಎಂಗಳಿಂದ ಮತ್ತು ಶಾಖೆಗಳಿಂದ ನಾಲ್ಕು ಬಾರಿ ಹಣ ಪಡೆಯಬಹುದು. ನಂತರ ನಗದು ಪಡೆಯುವಿಕೆಗೆ ₹15 ಹಾಗೂ ಜಿಎಸ್‌ಟಿ ಮೊತ್ತವನ್ನು ಸೇವಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಎಸ್‌ಬಿಐಯೇತರ ಬ್ಯಾಂಕ್‌ಗಳ ಎಟಿಎಂನಿಂದ ಹಣ ಪಡೆಯುವುದಕ್ಕೂ (ನಾಲ್ಕಕ್ಕಿಂತ ಹೆಚ್ಚು ಬಾರಿ) ₹15 ಹಾಗೂ ಜಿಎಸ್‌ಟಿ ಮೊತ್ತ ಪಾವತಿಸಬೇಕಾಗಲಿದೆ.

ಚೆಕ್‌ ಬುಕ್ ಶುಲ್ಕ ಎಷ್ಟು?

ಸದ್ಯ ಉಳಿತಾಯ ಖಾತೆದಾರರಿಗೆ ಹಣಕಾಸು ವರ್ಷವೊಂದರಲ್ಲಿ ಉಚಿತವಾಗಿ 10 ಚೆಕ್‌ಗಳಿರುವ ಪುಸ್ತಕವನ್ನು ಎಸ್‌ಬಿಐ ನೀಡುತ್ತಿದೆ. ಇದಕ್ಕಿಂತ ಹೆಚ್ಚು ಬೇಕಿದ್ದಲ್ಲಿ, ಪರಿಷ್ಕೃತ ನಿಯಮದ ಪ್ರಕಾರ 10 ಚೆಕ್‌ಗಳ ಒಂದು ಪುಸ್ತಕಕ್ಕೆ ₹40 ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಬೇಕು. 25 ಚೆಕ್‌ಗಳ ಪುಸ್ತಕಕ್ಕೆ ₹75 ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಬೇಕು.

ತುರ್ತು ಚೆಕ್‌ ಪುಸ್ತಕ ಬೇಕಾದಲ್ಲಿ 10 ಚೆಕ್‌ಗಳ ಪುಸ್ತಕಕ್ಕೆ ₹50 ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಬೇಕು.

ಹಿರಿಯ ನಾಗರಿಕರು ಚೆಕ್‌ ಪುಸ್ತಕಕ್ಕೆ ಶುಲ್ಕ ಪಾವತಿಸಬೇಕೆಂದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಎಸ್‌ಬಿಐ ಪ್ರಕಟಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT