ಬ್ಯಾಂಕ್‌ಗಳಿಗೆ ₹3,592 ಕೋಟಿ ವಂಚನೆ: ಸಿಬಿಐ ಪ್ರಕರಣ

ನವದೆಹಲಿ: 14 ಬ್ಯಾಂಕ್‌ಗಳಿಗೆ ಒಟ್ಟು ₹3,592.48 ಕೋಟಿ ವಂಚಿಸಿದ ಆರೋಪದ ಮೇಲೆ ಕಾನ್ಪುರದ ಫ್ರಾಸ್ಟ್ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಸಿಬಿಐ ಮಂಗಳವಾರ ದೂರು ದಾಖಲಿಸಿಕೊಂಡಿದೆ. ಬ್ಯಾಂಕ್ ಆಫ್ ಇಂಡಿಯಾದ ಕಾನ್ಪುರ ವಲಯ ಕಚೇರಿಯು ಸಂಸ್ಥೆಯ ವಿರುದ್ಧ ದೂರು ನೀಡಿದೆ.
ಸಂಸ್ಥೆಯ ನಿರ್ದೇಶಕರಾದ ಉದಯ್ ದೇಸಾಯಿ, ಅವರ ಪತ್ನಿ ನೀಲಿಮಾ, ಪುತ್ರ ಸುಜಯ್ ದೇಸಾಯಿ, ಪುತ್ರಿ ಸಂಜನಾ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ದೇಶಬಿಟ್ಟು ಹೋಗುವುದನ್ನು ತಡೆಯಲು 10 ಮಂದಿಯ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ.
‘ಈ ಸಂಸ್ಥೆಯ ಪ್ರವರ್ತಕರು ಯಾವುದೇ ವ್ಯಾಪಾರ ಚಟುವಟಿಕೆ ನಡೆಸುತ್ತಿರಲಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮದು ವ್ಯಾಪಾರಿ ಸಂಸ್ಥೆ ಎಂದು ಹೇಳಿಕೊಂಡು ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಪಡೆದಿದ್ದರು. ಆ ಹಣವನ್ನು ಬೇರೆಬೇರೆ ಉದ್ದೇಶಗಳಿಗೆ ಬಳಸಿದ್ದರು. ಸಾಲ ಮರುಪಾವತಿಯಲ್ಲಿ ವಿಫಲರಾಗಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.