ಭಾನುವಾರ, ಜನವರಿ 26, 2020
24 °C

ವಿಜಯ್ ಮಲ್ಯ ಚರಾಸ್ತಿ ಹರಾಜಿಗೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರಿಂದ ಸಾಲ ವಸೂಲಿ ಮಾಡಲು ಅವರ ಚರಾಸ್ತಿಗಳನ್ನು ಹರಾಜು ಹಾಕಬಹುದು ಎಂದು ಸ್ಟೇಟ್ ಬ್ಯಾಂಕ್ ನೇತೃತ್ವದ 15 ಬ್ಯಾಂಕ್‌ಗಳ ಒಕ್ಕೂಟಕ್ಕೆ ಇಲ್ಲಿನ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ನ್ಯಾಯಾಲಯ 2016ರಲ್ಲಿ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು. ಈ ವೇಳೆ ಅವರಿಗೆ ಸೇರಿದ ಷೇರುಗಳು
ಹಾಗೂ ಇತರೆ ಸ್ವತ್ತುಗಳನ್ನು ನ್ಯಾಯಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಶಪಡಿಸಿಕೊಂಡಿತ್ತು.

ಈ ಚರಾಸ್ತಿಗಳನ್ನು ಬಿಡುಗಡೆ ಮಾಡಿದರೆ, ಅವುಗಳನ್ನು ಹರಾಜು ಹಾಕಿ ಸಾಲ ಮರುಪಾವತಿಗೆ ಬಳಸಿಕೊಳ್ಳುತ್ತೇವೆ ಎಂದು ಬ್ಯಾಂಕ್‌ಗಳ ಒಕ್ಕೂಟ ಈ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು