ನವದೆಹಲಿ: ‘ಮಾರುಕಟ್ಟೆಯಲ್ಲಿ ಭಾಸ್ಮತಿ ಅಕ್ಕಿ ದರ ಏರಿಕೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಕಾರಣವಾಗಿಲ್ಲ’ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ (ಎಐಆರ್ಇಎ) ತಿಳಿಸಿದೆ.

ಭಾಸ್ಮತಿ ಅಕ್ಕಿ (1509 ಮತ್ತು 1718 ಹೆಸರಿನ ತಳಿ) ದರವು ಮಾರ್ಚ್ನಿಂದಲೇ ಅಲ್ಪಮಟ್ಟಿಗೆ ಏರಿಕೆ ಕಂಡಿತ್ತು. ಸೌದಿ ಅರೇಬಿಯಾ, ಇರಾನ್ ಮತ್ತು ಇರಾಕ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿದೆ. ಆದರೆ, ಇದಕ್ಕೆ ಅನುಗುಣವಾಗಿ ಪೂರೈಕೆ ಇಲ್ಲದಂತಾಗಿದೆ. ಇದೇ ದರ ಏರಿಕೆಗೆ ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೋಯೆಲ್ ಹೇಳಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಭಾಸ್ಮತಿ ಅಕ್ಕಿ (1509 ತಳಿ) ದರವು ಕೆ.ಜಿಗೆ ₹62 ಇತ್ತು. ಆದರೆ, ಅತಿಹೆಚ್ಚು ಉತ್ಪಾದನೆಯಾಗಿದ್ದರಿಂದ ಇಳಿಕೆ ಕಂಡಿತ್ತು. ಅಲ್ಲದೆ, ಭಾಸ್ಮತಿಯ ಇತರೆ ತಳಿಗಳ ಉತ್ಪಾದನೆಯಲ್ಲಿನ ಹೆಚ್ಚಳವೂ ದರ ಇಳಿಕೆಗೆ ಕಾರಣವಾಗಿತ್ತು ಎಂದು ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇಥಿಯಾ ಹೇಳಿದ್ದಾರೆ.

ಫೆಬ್ರುವರಿವರೆಗೆ ಈ ತಳಿಯ ಅಕ್ಕಿ ಬೆಲೆ ಕೆ.ಜಿಗೆ ₹52 ಇತ್ತು. ಸದ್ಯ ₹58ಕ್ಕೆ ಮುಟ್ಟಿದೆ ಎಂದು ತಿಳಿಸಿದ್ದಾರೆ.

2024-25ರಲ್ಲಿ ಭಾರತವು 60 ಲಕ್ಷ ಟನ್ ಭಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದ್ದರೆ, ಪಾಕಿಸ್ತಾನವು 1 ಕೋಟಿ ಟನ್ನಷ್ಟು ರಫ್ತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.