ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ಹೈದರಾಬಾದ್‌ನಲ್ಲಿ ಐ.ಟಿ ನೇಮಕಾತಿ ಪ್ರಮಾಣ ಹೆಚ್ಚಳ

Published 25 ಮೇ 2024, 14:07 IST
Last Updated 25 ಮೇ 2024, 14:07 IST
ಅಕ್ಷರ ಗಾತ್ರ

ಮುಂಬೈ: ದೇಶದಾದ್ಯಂತ ಏಪ್ರಿಲ್‌ನಲ್ಲಿ ಐ.ಟಿ ವಲಯದಲ್ಲಿ ಒಟ್ಟಾರೆ ಉದ್ಯೋಗ ನೇಮಕಾತಿಯು ಶೇ 3.6ರಷ್ಟು ಕುಸಿದಿದೆ. ಇದರ ನಡುವೆಯೂ ಬೆಂಗಳೂರಲ್ಲಿ ಶೇ 24ರಷ್ಟು ಮತ್ತು ಹೈದರಾಬಾದ್‌ನಲ್ಲಿ ಶೇ 41.5ರಷ್ಟು ನೇಮಕಾತಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈ ನಗರಗಳು ಐ.ಟಿ ವೃತ್ತಿಪರರಿಗೆ ಉತ್ತಮ ವಾತಾವರಣ ಸೃಷ್ಟಿಸುತ್ತಿವೆ ಎಂದು ಉದ್ಯೋಗ ಅವಕಾಶಗಳ ಮಾಹಿತಿ ನೀಡುವ ಅಂತರ್ಜಾಲ ತಾಣ ಇಂಡೀಡ್ ತಿಳಿಸಿದೆ.

ಉದ್ಯೋಗ ನೇಮಕಾತಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಉದ್ಯೋಗಾಕಾಂಕ್ಷಿಗಳ ಪ್ರಮಾಣ ಹೈದರಾಬಾದ್‌ನಲ್ಲಿ ಶೇ 161ರಷ್ಟು ಏರಿಕೆಯಾಗಿದ್ದರೆ, ಬೆಂಗಳೂರಲ್ಲಿ ಶೇ 80ರಷ್ಟು ಹೆಚ್ಚಳವಾಗಿದೆ.

ಇಂಡೀಡ್ ವೇದಿಕೆಯು 2023ರ ಏಪ್ರಿಲ್‌ನ ಅಂಕಿ–ಅಂಶಕ್ಕೆ ಹೋಲಿಕೆ ಮಾಡಿ ಈ ವರದಿ ತಯಾರಿಸಿದೆ. ವಿಶ್ಲೇಷಣೆ, ಎಪಿಐ, ಜಾವಾಸ್ಕ್ರಿಪ್ಟ್‌ ಮತ್ತು ಎಸ್‌ಕ್ಯುಎಲ್‌ ಕ್ಷೇತ್ರದಲ್ಲಿನ ಉದ್ಯೋಗಾವಕಾಶದಲ್ಲಿ ಏರಿಕೆ ಕಂಡಿವೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT