ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Share Market | ವಹಿವಾಟಿನ ದಿನವೇ ಪಾವತಿ: ಮಾರ್ಚ್‌ 28ರಿಂದ ಹೊಸ ವ್ಯವಸ್ಥೆ ಜಾರಿ

Published 27 ಮಾರ್ಚ್ 2024, 13:45 IST
Last Updated 27 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಗುರುವಾರದಿಂದ ‘ಟಿ+0’ ಬೀಟಾ ಆವೃತ್ತಿ ಅನುಷ್ಠಾನಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸಜ್ಜಾಗಿದೆ.

ಈ ಹೊಸ ವ್ಯವಸ್ಥೆಯಿಂದ ಷೇರು ಖರೀದಿ ಮ‌ತ್ತು ಮಾರಾಟ ಮಾಡಿದ ವಹಿವಾಟಿನ ದಿನವೇ ಹೂಡಿಕೆದಾರರ ಡಿಮ್ಯಾಟ್‌ ಖಾತೆಗೆ ಹಣ ಪಾವತಿಯಾಗಲಿದೆ. ಆರಂಭಿಕ ಹಂತದಲ್ಲಿ ಇಚ್ಛಿಕ ಆಧಾರದ ಮೇಲೆ ಕೆಲವೇ ದಲ್ಲಾಳಿಗಳ ಮೂಲಕ ಆಯ್ದ  ಷೇರುಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸೆಬಿ ತಿಳಿಸಿದೆ.

ಬಜಾಜ್‌ ಆಟೊ, ವೇದಾಂತ, ಹಿಂಡಾಲ್ಕೊ, ಎಸ್‌ಬಿಐ, ಟ್ರೆಂಟ್‌, ಟಾಟಾ ಕಮ್ಯುನಿಕೇಷನ್‌, ನೆಸ್ಲೆ ಇಂಡಿಯಾ, ಸಿಫ್ಲಾ, ಎಂಆರ್‌ಎಫ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಬಿಪಿಸಿಎಲ್‌, ಒಎನ್‌ಜಿಸಿ, ಎನ್‌ಎಂಡಿಸಿ ಹಾಗೂ ಅಂಬುಜಾ ಸಿಮೆಂಟ್ಸ್‌ ಷೇರುಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿವರಿಸಿದೆ.

ಪ್ರಸ್ತುತ ಷೇರು ವಿನಿಮಯ ಕೇಂದ್ರಗಳು ‘ಟಿ+1’ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಇದರಡಿ ಆದೇಶ ಜಾರಿಯಾದ 24 ಗಂಟೆಯೊಳಗೆ ಹೂಡಿಕೆದಾರರ ಖಾತೆಗೆ ಹಣ ಜಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT