ಬಜೆಟ್ ಅಂದಾಜಿನ ಶೇ 82.7ಕ್ಕೆ ತಲುಪಿದ ವಿತ್ತೀಯ ಕೊರತೆ

ನವದೆಹಲಿ: ದೇಶದ ವಿತ್ತೀಯ ಕೊರತೆಯು ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಅಂದಾಜಿನ ಶೇಕಡ 82.7ರಷ್ಟು ಆಗಿದೆ. ಸರ್ಕಾರದ ವೆಚ್ಚದಲ್ಲಿ ಏರಿಕೆ ಆಗಿರುವುದೇ ಇದಕ್ಕೆ ಕಾರಣ.
ಹಿಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಪರಿಷ್ಕೃತ ಅಂದಾಜಿನ ಶೇ 76ರಷ್ಟು ಇತ್ತು.
ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ಮಾಹಿತಿಯ ಪ್ರಕಾರ, ಮೌಲ್ಯದ ಲೆಕ್ಕದಲ್ಲಿ 2022ರ ಫೆಬ್ರುವರಿ ಅಂತ್ಯಕ್ಕೆ ವಿತ್ತೀಯ ಕೊರತೆಯು ₹ 13.16 ಲಕ್ಷ ಕೋಟಿ ಆಗಿದೆ.
ಸರ್ಕಾರದ ಒಟ್ಟು ವೆಚ್ಚವು ಫೆಬ್ರುವರಿ ಅಂತ್ಯಕ್ಕೆ ಪರಿಷ್ಕೃತ ಅಂದಾಜಿನ ಶೇ 83.4ರಷ್ಟು ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 81.7ರಷ್ಟು ಆಗಿತ್ತು ಎಂದು ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.9ರಷ್ಟು (₹ 15.91 ಲಕ್ಷ ಕೋಟಿ) ಇರಲಿದೆ ಎಂದು ಸರ್ಕಾರ ನಿರೀಕ್ಷೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.