ಗುರುವಾರ , ಏಪ್ರಿಲ್ 9, 2020
19 °C
ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ

ಡಬ್ಬಿ ಮೆಣಸಿನಕಾಯಿಗೆ ಗರಿಷ್ಠ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿನ ಮಾರುಕಟ್ಟೆಯಲ್ಲಿ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ದರದಲ್ಲಿ ಏರಿಕೆ ಕಂಡಿದ್ದು ಗರಿಷ್ಠ ₹ 31,099 ರವರೆಗೆ ತಲುಪಿದೆ.

ಬ್ಯಾಡಗಿ ಕಡ್ಡಿ ಹಾಗೂ ಗುಂಟೂರ ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಮಾರುಕಟ್ಟೆಗೆ ಸೋಮವಾರ 1,20,083 ಚೀಲ ಆವಕವಾಗಿದ್ದು, ಕಳೆದ ಗುರುವಾರಕ್ಕಿಂತ (1,26,583 ಚೀಲ) 6,500 ಚೀಲ ಆವಕದಲ್ಲಿ ಇಳಿಮುಖವಾಗಿದೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಒಂದೆ ದಿನದಲ್ಲಿ 3ನೇ ಬಾರಿಗೆ ಲಕ್ಷಕ್ಕಿಂತ ಹೆಚ್ಚು ಚೀಲ ಆವಕವಾದಂತಾಗಿದೆ.

ಸೋಮವಾರದ ದರ ಪ್ರತಿ ಕ್ವಿಂಟಲ್‌ಗೆ
ಬ್ಯಾಡಗಿ ಕಡ್ಡಿ
ಕನಿಷ್ಠ- ₹1,969, ಗರಿಷ್ಠ- ₹23,509

ಬ್ಯಾಡಗಿ ಡಬ್ಬಿ
ಕನಿಷ್ಠ- ₹3,029, ಗರಿಷ್ಠ- ₹31,099

ಗುಂಟೂರು
ಕನಿಷ್ಠ- ₹769, ಗರಿಷ್ಠ- ₹10,069

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)