ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಬಸ್ಟಾ ಕಾಫಿ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

Published 3 ಮೇ 2024, 22:46 IST
Last Updated 3 ಮೇ 2024, 22:46 IST
ಅಕ್ಷರ ಗಾತ್ರ

ಕಳಸ : ಕಳೆದ ವಾರ ಏರಿಕೆ ಕಂಡಿದ್ದ ರೊಬಸ್ಟಾ ಹಾಗೂ ಅರೇಬಿಕಾ ಕಾಫಿ ಧಾರಣೆಯು ಇಳಿಕೆಯಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರತಿ ಕೆ.ಜಿ.ಗೆ ₹400 ಮುಟ್ಟಿದ್ದ ರೊಬಸ್ಟಾ ಕಾಫಿ ದರವು ಸದ್ಯ ₹330ಕ್ಕೆ ಇಳಿದಿದೆ. ಕೆ.ಜಿ.ಗೆ ₹350ಕ್ಕೆ ತಲುಪಿದ್ದ ಅರೇಬಿಕಾ ಕಾಫಿ ಬೆಲೆಯು ₹300ಕ್ಕೆ ಕುಸಿದಿದೆ. 

ಗುರುವಾರ ರಾತ್ರಿ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿಯು ಶೇ 7.5ರಷ್ಟು ಮೌಲ್ಯ ಕಳೆದುಕೊಂಡರೆ, ಅರೇಬಿಕಾ ಶೇ 4.5ರಷ್ಟು ಮೌಲ್ಯ ಕಳೆದುಕೊಂಡಿದೆ. ಕಳೆದ ವಾರ ಪ್ರತಿ ಟನ್‌ಗೆ ಗರಿಷ್ಠ 4,165 ಡಾಲರ್‌ಗೆ ಏರಿಕೆಯಾಗಿದ್ದ ರೊಬಸ್ಟಾ ಧಾರಣೆಯು, 3,630 ಡಾಲರ್‌ಗೆ ಇಳಿಕೆಯಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕಾಫಿ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಿದ್ದರಿಂದ ಈ ಕುಸಿತ ಉಂಟಾಗಿದೆ. ರೊಬಸ್ಟಾ ಧಾರಣೆಯು ಜಾಗತಿಕ ಮಾರುಕಟ್ಟೆಯಲ್ಲಿ ಮುಂದಿನ ವರ್ಷದವರೆಗೆ ಹೆಚ್ಚಳವಾಗುವುದು ಅನುಮಾನ. ಆದರೆ, ಬೆಲೆ ತೀರಾ ಕುಸಿಯಲಾರದು ಎಂಬುದು ಅನುಭವಿ ಬೆಳೆಗಾರರ ಅಭಿಪ್ರಾಯ.

ಸ್ಥಳೀಯ ಕಾಫಿ ಮಾರುಕಟ್ಟೆಯಲ್ಲಿ ಮೂಟೆಗೆ (50 ಕೆ.ಜಿ.) ₹10,500ಕ್ಕೆ ಏರಿದ್ದ ರೊಬಸ್ಟಾ ಬೆಲೆಯು ಈಗ ₹8,500ಕ್ಕೆ ಕುಸಿದಿದೆ. ಬಹುತೇಕ ಬೆಳೆಗಾರರು ಈಗಾಗಲೇ ಉತ್ಪನ್ನ ಮಾರಾಟ ಮಾಡಿದ್ದರೂ ಕೆಲವು ಬೆಳೆಗಾರರು ಇನ್ನಷ್ಟು ಬೆಲೆ ಏರಿಕೆಯ ನಿರೀಕ್ಷೆಯಿಂದ ದಾಸ್ತಾನು ಮಾಡಿದ್ದರು. ಅಂತಹ ಬೆಳೆಗಾರರು ಈಗ ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT