ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ನಿರ್ಮಾಣ ಸಲಕರಣೆಗಳ ಮಾರಾಟ ಹೆಚ್ಚಳ

Published 6 ನವೆಂಬರ್ 2023, 15:32 IST
Last Updated 6 ನವೆಂಬರ್ 2023, 15:32 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ನಿರ್ಮಾಣ ಸಲಕರಣೆಗಳ ಉದ್ಯಮವು ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಶೇ 31ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 30,078 ಸಲಕರಣೆಗಳು ಮಾರಾಟವಾಗಿವೆ.

ಭಾರತೀಯ ನಿರ್ಮಾಣ ಸಲಕರಣೆಗಳ ಒಕ್ಕೂಟವು (ಐಸಿಇಎಂಎ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2022–23ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉದ್ಯಮವು 22,941 ಸಲಕರಣೆಗಳನ್ನು ಮಾರಾಟ ಮಾಡಿತ್ತು.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮಾರಾಟ ಆಗಿರುವ 30,078 ಸಲಕರಣೆಗಳಲ್ಲಿ 27,423 ರಷ್ಟು ದೇಶದಲ್ಲಿ ಮಾರಾಟ ಆಗಿದೆ. ಉಳಿದ 2,655 ರಫ್ತು ಮಾಡಲಾಗಿದೆ ಎಂದು ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಮೂಲಸೌಕರ್ಯ ಯೋಜನೆಗಳ ಅನುಷ್ಠಾನವು ವೇಗ ಪಡೆದುಕೊಂಡಿದ್ದರಿಂದ ನಿರ್ಮಾಣ ಸಲಕರಣೆಗಳ ಮಾರಾಟ ಹೆಚ್ಚಳವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿ.ವಿವೇಕಾನಂದ  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT