ನ್ಯೂಯಾರ್ಕ್: ಅಮೆರಿಕ ಓಪನ್ ಫೈನಲ್ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಮಣಿಸಿದ ಕಾರ್ಲೋಸ್ ಅಲ್ಕರಾಜ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಸ್ಪೇನ್ನ ಈ ಆಟಗಾರ ಭಾನುವಾರ ನಡೆದ ಸೆಣಸಾಟದಲ್ಲಿ ಇಟಲಿಯ ಸಿನ್ನರ್ ಅವರನ್ನು 6–2, 3–6, 6–1 ಮತ್ತು 6–4 ಸೆಟ್ಗಳ ಅಂತರದಿಂದ ಮಣಿಸಿದರು.

ಇದರೊಂದಿಗೆ ಅಲ್ಕರಾಜ್ ಗೆದ್ದ ಗ್ರ್ಯಾನ್ಸ್ಲಾಮ್ಗಳ ಸಂಖ್ಯೆ 6ಕ್ಕೆ ಏರಿಕೆಯಾಯಿತು.

ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಅಲ್ಕರಾಜ್, ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಗೆಲ್ಲುವ ಕನಸು ಕಂಡಿದ್ದ ಅನುಭವಿ ನೊವಾಕ್ ಜೊಕೊವಿಚ್ ಅವರನ್ನು ಸೆಮಿಫೈನಲ್ನಲ್ಲಿ ನೇರ (6–4, 7–6 (7–4), 6–2) ಸೆಟ್ಗಳಿಂದ ಮಣಿಸಿದ್ದರು.

ಮತ್ತೊಂದೆಡೆ, ಕಳೆದ ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸಿನ್ನರ್, 25ನೇ ಶ್ರೇಯಾಂಕದಲ್ಲಿರುವ ಕೆನಡಾ ಆಟಗಾರ ಫೆಲಿಕ್ಸ್ ಓಜೆ ಆಲಿಯಾಸೀಮ್ ಅವರನ್ನು ಪ್ರಯಾಸದಿಂದ (6–1, 3–6, 6–3, 6–4 ಅಂತರ) ಸೋಲಿಸಿ ಪ್ರಶಸ್ತಿ ಸುತ್ತಿಗೆ ತಲುಪಿದ್ದರು.
.ಅಮೆರಿಕ ಓಪನ್ ಟೆನಿಸ್ | ಮಹಿಳಾ ಸಿಂಗಲ್ಸ್: ಅರಿನಾ ಸಬಲೆಂಕಾಗೆ ಸತತ ಎರಡನೇ ಕಿರೀಟ.US Open Tennis 2025: ಬ್ಲಾಕ್ಬಸ್ಟರ್ ಸೆಣಸಿಗೆ ಅಲ್ಕರಾಜ್–ಸಿನ್ನರ್ ಸಜ್ಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.