ನ್ಯೂಯಾರ್ಕ್: ಬೆಲಾರೂಸ್ ದೇಶದ ಅರಿನಾ ಸಬಲೆಂಕಾ ಸತತ ಎರಡನೇ ಬಾರಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕಿರೀಟ ಧರಿಸಿದರು.

ಆದರೆ ಈ ಸಲ ಅವರಿಗೆ ಕಿರೀಟವು ಸುಲಭವಾಗಿ ಒಲಿಯಲಿಲ್ಲ. ಪ್ರಶಸ್ತಿ ಗೆಲುವಿನಿಂದ ಸಬಲೆಂಕಾ ಎರಡು ಪಾಯಿಂಟ್ಗಳಿಂದ ದೂರ ಇದ್ದರು. ಅವರ ಅನುಭವ ಮತ್ತು ಕೌಶಲ್ಯಕ್ಕೆ ಸತತ ಎರಡು ಅಂಕ ಗಳಿಸಿ ಜಯಿಸುವುದು ಕಷ್ಟವೇನೂ ಆಗಿರಲಿಲ್ಲ.

ಆದರೆ ತಮ್ಮೆದುರಿಗೆ ಬಂದ ಚೆಂಡನ್ನು ಓವರ್ ಹೆಡ್ ಸ್ಮ್ಯಾಷ್ ಮಾಡುವ ಬದಲು ಬ್ಯಾಕ್ಪೆಡ್ಲಿಂಗ್ ಮಾಡಿದರು. ಚೆಂಡು ನೆಟ್ನೊಳಗೇ ಬಿತ್ತು. ಇದರಿಂದಾಗಿ ಅವರ ಎದುರಾಳಿ ಅಮಂದಾ ಅನಿಸಿಮೊವಾ ಅವರಿಗೂ ಒಂದು ‘ಬ್ರೇಕ್’ ಸಿಗುವ ಅವಕಾಶ ಲಭಿಸಿತು. ಶನಿವಾರ ನಡೆದ ಸಿಂಗಲ್ಸ್ ಫೈನಲ್ನಲ್ಲಿ ಈ ‘ಗಂಭೀರ ತಪ್ಪು’ ಎಸಗಿದ ನಂತರ ಸಬಲೆಂಕಾ ತಮ್ಮ ರೆಕೆಟ್ ಅನ್ನು ಅನ್ನು ನೀಲಿ ಅಂಕಣದಲ್ಲಿ ಬೀಳಿಸಿ ವಿಷಾದದ ನಗೆ ಬೀರಿದರು. ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಜೂನ್ನಲ್ಲಿ ಫ್ರೆಂಚ್ ಓಪನ್ ಫೈನಲ್ಗಳಲ್ಲಿ ಸೋತಿದ್ದ ನೆನಪುಗಳು ಅವರ ಮನದಲ್ಲಿ ಹಾದುಹೋಗಿರಬಹುದು. ನಿಧಾನವಾಗಿ ಸಾವರಿಸಿಕೊಂಡ ಅವರು 15 ನಿಮಿಷಗಳಲ್ಲಿ ವಿಜಯದ ಸಂಭ್ರಮ ಅಚರಿಸಿದರು. 6–3, 7–6 (3)ರಿಂದ ಅನಿಸಿಮೊವಾ ವಿರುದ್ಧ ಗೆದ್ದರು.

‘ಆ ಸಂದೇಹದ ಭಾವವು ಮನದಲ್ಲಿ ಬಂದು ಹೋಯಿತು. ಅದರ ನಂತರ ದೀರ್ಘ ಉಸಿರೆಳೆದುಕೊಂಡು ಮನವನ್ನು ಸ್ಥಿಮಿತಕ್ಕೆ ತಂದುಕೊಂಡೆ. ಇದೆಲ್ಲವೂ ಆಗುತ್ತಿರುತ್ತದೆ. ಮುಂದೆ ಆಗುವ ಕೆಲಸ ನೋಡೋಣ ವೆಂದು ಕೊಂಡು ಆಡಿದೆ’ ಎಂದು ಸಬಲೆಂಕಾ ಪಂದ್ಯದ ನಂತರ ಹೇಳಿದರು.

ಇದು ಅವರ ನಾಲ್ಕನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ.ಅವೆಲ್ಲವೂ ಅವರಿಗೆ ಹಾರ್ಡ್ಕೋರ್ಟ್ ಮೇಲೆಯೇ ಒಲಿದಿರುವ ಪ್ರಶಸ್ತಿಗಳು. 27 ವರ್ಷದ ಸಬಲೆಂಕಾ ಅಮೆರಿಕ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಜಯಿಸಿದ ದಾಖಲೆ ಬರೆದರು. 2012–2014ರ ಅವಧಿಯಲ್ಲಿ ಸೆರೆನಾ ವಿಲಿಯಮ್ಸ್ ಸತತ ಎರಡು ಬಾರಿ ಜಯಿಸಿದ್ದರು. ಅವರು ಕಳೆದೊಂದು ಋತುವಿನಲ್ಲಿ ಮೂರು ಟೂರ್ನಿಗಳ ಫೈನಲ್ಗಳಲ್ಲಿ ಸೋತಿದ್ದರು.

‘ನಾನು ಅವರನ್ನು(ಸಬಲೆಂಕಾ) ಅಪಾರವಾಗಿ ಗೌರವಿಸುತ್ತೇನೆ. ಅವರು ಬಹಳಷ್ಟು ಕಠಿಣ ಪರಿಶ್ರಮಪಟ್ಟು ಅಭ್ಯಾಸ ಮಾಡುತ್ತಾರೆ. ಆದ್ದರಿಂದ ಅವರು ಈ ಎತ್ತರಕ್ಕೇರಿದ್ದಾರೆ’ ಎಂದು 24 ವರ್ಷದ ಅನಿಸಿಮೊವಾ ಹೇಳಿದರು.

ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ 24 ಸಾವಿರ ಪ್ರೇಕ್ಷಕರು ವೀಕ್ಷಿಸಿದ ಫೈನಲ್ನಲ್ಲಿ ಸಬಲೆಂಕಾ ಮೊದಲ ಸೆಟ್ನಲ್ಲಿ ಸುಲಭವಾಗಿ ಅಮಂಡಾ ಅವರನ್ನು ಸೋಲಿಸಿದರು. ಆದರೆ ಎರಡನೇ ಸೆಟ್ನಲ್ಲಿ ಅಮೆರಿಕದ ಆಟಗಾರ್ತಿ ತಿರುಗೇಟು ನೀಡಿದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸೆಟ್ ಫಲಿತಾಂಶವು ಟೈಬ್ರೇಕರ್ನಲ್ಲಿ ನಿರ್ಧಾರವಾಯಿತು.
.ಅಮೆರಿಕ ಓಪನ್ ಟೆನಿಸ್: ಅಲ್ಕರಾಜ್, ಜೊಕೊವಿಚ್ ಮುನ್ನಡೆ.ಅಮೆರಿಕ ಓಪನ್ ಟೆನಿಸ್ ಟೂರ್ನಿ: ನೊವಾಕ್ ಜೊಕೊವಿಚ್ ಕನಸು ಭಗ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.