ಬೆಂಗಳೂರು: ಕೊರೊನಾ ವೈರಸ್ ಆತಂಕ ಸೋಮವಾರ ದೇಶೀಯ ಷೇರುಪೇಟೆಗಳ ಮೇಲೆ ಆರಂಭದಿಂದಲೇ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 2ರಷ್ಟು ಕುಸಿತ ದಾಖಲಿಸಿತು.

806.89ಅಂಶಗಳ ಇಳಿಕೆ ಕಂಡ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 40,363.23ಅಂಶ ತಲುಪಿತು. ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 242.25ಅಂಶಗಳ ಕುಸಿತದೊಂದಿಗೆ 11,838.60 ಅಂಶ ಮುಟ್ಟಿತು.

ಭಾರ್ತಿ ಇನ್ಫ್ರಾಟೆಲ್ನೊಂದಿಗೆ ಇಂಡಸ್ ಟವರ್ಸ್ ವಿಲೀನಗೊಳಿಸುವಿಕೆಗೆ ದೂರ ಸಂಪರ್ಕ ಇಲಾಖೆ ಸಮ್ಮತಿಸಿರುವ ಕಾರಣ, ವಹಿವಾಟು ಆರಂಭದಲ್ಲಿ ಭಾರ್ತಿ ಇನ್ಫ್ರಾಟೆಲ್ ಷೇರು ಶೇ 10 ಹಾಗೂ ವೊಡಾಫೋನ್ ಐಡಿಯಾ ಷೇರು ಶೇ 14ರಷ್ಟು ಏರಿಕೆ ದಾಖಲಿಸಿತು. ಆದರೆ, ನಂತರದಲ್ಲಿಭಾರ್ತಿ ಇನ್ಫ್ರಾಟೆಲ್ ಷೇರು ಶೇ 4.3, ವೊಡಾಫೋನ್ ಐಡಿಯಾ ಶೇ 12.50ಹಾಗೂ ಭಾರ್ತಿ ಏರ್ಟೆಲ್ ಷೇರುಗಳು ಶೇ 2.89ರಷ್ಟು ಕುಸಿತ ಕಂಡವು.

ಹೀರೊ ಮೋಟೊಕಾರ್ಪ್, ಎಲ್ಆ್ಯಂಡ್ಟಿ, ಎನ್ಬಿಸಿಸಿ, ಶೋಭಾ, ಜಿಐಸಿ ಹೌಸಿಂಗ್ ಫೈನಾನ್ಸ್, ಸ್ಟರ್ಲಿಂಗ್ ಆ್ಯಂಡ್ ವಿಲ್ಸನ್ ಸೋಲಾರ್, ಸಿಎಸ್ಬಿ ಬ್ಯಾಂಕ್ ಸೇರಿದಂತೆ ರಾಷ್ಟ್ರೀಯ ಷೇರು ಪೇಟೆಯ ಸುಮಾರು 84 ಷೇರುಗಳು 52 ವಾರಗಳ ಕನಿಷ್ಠ ಮಟ್ಟ ಮುಟ್ಟಿವೆ.

ಮುಂಬೈ ಷೇರು ಪೇಟೆಯಲ್ಲಿ ಸುಮಾರು 25 ಷೇರುಗಳು ಇಳಿಕೆ ದಾಖಲಿಸಿವೆ. ಟಾಟಾ ಸ್ಟೀಲ್ ಶೇ 6.28, ಐಸಿಐಸಿಐ ಬ್ಯಾಂಕ್ ಶೇ 3.01, ಎಚ್ಡಿಎಫ್ಸಿ ಶೇ 2.82, ಎನ್ಟಿಪಿಸಿ ಶೇ 1.26ಹಾಗೂ ಆ್ಯಕ್ಸಿಸ್ ಬ್ಯಾಂಕ್ ಶೇ 2.50, ಇನ್ಫೊಸಿಸ್ ಶೇ 0.14, ಟೆಕ್ ಮಹೀಂದ್ರ ಶೇ 0.92, ಟಿಸಿಎಸ್ ಶೇ 2.08ರಷ್ಟು ಹಾಗೂ ಆರೋಗ್ಯ ವಲಯ, ಲೋಹ ವಲಯಗಳಿಗೆ ಸೇರಿದ ಷೇರುಗಳ ಬೆಲೆ ಸಹ ಇಳಿಕೆಯಾಗಿವೆ.

ಚೀನಾದ ಹೊರಗೂ ವ್ಯಾಪಿಸಿರುವ ಕೊರೊನಾ ವೈರಸ್ನಿಂದ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಏಪ್ರಿಲ್ನ 'ಗೋಲ್ಡ್ ಫ್ಯೂಚರ್ಸ್' ಶೇ 2ರಷ್ಟು ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಫ್ಯೂಚರ್ಗಳು ₹43,634ಹಾಗೂ 1 ಕೆಜಿ ಬೆಳ್ಳಿ ಫ್ಯೂಚರ್ಗಳ ವಹಿವಾಟು ₹49,030ತಲುಪಿದೆ.

ದಕ್ಷಿಣ ಕೊರಿಯಾ ತಲ್ಲಣ

ಕೊರೊನಾ ವೈರಸ್ ದಕ್ಷಿಣ ಕೊರಿಯಾದಲ್ಲಿ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಸುಮಾರು 700 ಮಂದಿಗೆ ಸೋಂಕು ತಗುಲಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ 76,963 ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ವೈರಸ್ ಪರಿಣಾಮದಿಂದ ಸಾವಿಗೀಡಾದವರ ಸಂಖ್ಯೆ 2,400ಕ್ಕೆ ಏರಿಕೆಯಾಗಿದೆ. ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾ ತತ್ತರಿಸಿದೆ. ವೈರಸ್ ವ್ಯಾಪ್ತಿ ವಿಸ್ತರಿಸಿದರೆ ಎಲೆಕ್ಟ್ರಾನಿಕ್ ಉಪಕರಣಗಳ ಪ್ರಮುಖ ತಯಾರಿಕಾ ವಲಯದ ಮೇಲೆ ತೀವ್ರ ಪರಿಣಾಮ ಎದುರಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.