ಸೋಮವಾರ, ಜೂಲೈ 6, 2020
23 °C

ಲಾಕ್‌ಡೌನ್ | ಏಪ್ರಿಲ್‌ ತಿಂಗಳಲ್ಲಿ ಶೂನ್ಯ ಮಾರಾಟ ದಾಖಲಿಸಿದ ಮಾರುತಿ ಸುಜುಕಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್–19 ಭೀತಿಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ಇದೇ ಮೊದಲ ಬಾರಿಗೆ ಏಪ್ರಿಲ್‌ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಶೂನ್ಯ ಮಾರಾಟ ದಾಖಲಿಸಿದೆ.

ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರವು ಲಾಕ್‌ಡೌನ್‌ ಘೋಷಿಸುತ್ತಿದ್ದಂತೆ, ಕಾರು ತಯಾರಿಕಾ ಕಂಪೆನಿಯು ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಈಗಾಗಲೇ ಮಂದಗತಿಯ ಆರ್ಥಿಕ ಪ್ರಗತಿ ಮತ್ತು ಬೇಡಿಕೆ ಕುಸಿತದಿಂದ ಬಳಲುತ್ತಿದ್ದ ವಾಹನ ತಯಾರಿಕಾ ಉದ್ಯಮದ ಮೇಲೆ ಲಾಕ್‌ಡೌನ್‌ ಮತ್ತಷ್ಟು ಪರಿಣಾಮ ಉಂಟುಮಾಡಿದೆ.

ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 35 ಸಾವಿರ ದಾಟಿದೆ. 1,147 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು