ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ದಕ್ಷಿಣದಲ್ಲಿ ಡಾಬರ್‌ನ ಹೊಸ ಕಾರ್ಖಾನೆ: ಸಿಇಒ ಮೋಹಿತ್‌ ಮಲ್ಹೋತ್ರಾ  

Published 19 ನವೆಂಬರ್ 2023, 14:43 IST
Last Updated 19 ನವೆಂಬರ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ : ಪ್ರಮುಖ ಎಫ್‌ಎಂಸಿಜಿ ಮತ್ತು ಆಯುರ್ವೇದಿಕ್ ಉತ್ಪನ್ನಗಳ ತಯಾರಕ ಡಾಬರ್‌, ವರ್ಷದೊಳಗೆ ದಕ್ಷಿಣ ಭಾರತದಲ್ಲಿ ತನ್ನ ಹೊಸ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಸಿಇಒ ಮೋಹಿತ್‌ ಮಲ್ಹೋತ್ರಾ ಹೇಳಿದ್ದಾರೆ.

ದೇಶೀಯ ಮಾರಾಟದ ಶೇ 20ರಷ್ಟು ಪಾಲನ್ನು ಕಂಪನಿಯು ದಕ್ಷಿಣದಲ್ಲಿ ಹೊಂದಿದೆ. ಕಳೆದ ಐದಾರು ವರ್ಷಗಳಲ್ಲಿ ಈ ಭಾಗದ ಮಾರಾಟವು ದುಪ್ಪಟ್ಟಾಗಿದೆ. ಕಂಪನಿಯು ದೇಶದಲ್ಲಿ ಈಗಾಗಲೇ 13 ತಯಾರಿಕಾ ಘಟಕಗಳನ್ನು ಹೊಂದಿದೆ. ಬೇಡಿಕೆ ಪೂರೈಸಲು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತೊಂದು ಘಟಕವನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು.

ಮದ್ಯಪ್ರಾಚ್ಯ ಮತ್ತು ಯುರೋಪ್‌ನ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ತಯಾರಿಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಾಗುವುದು. ಡಾಬರ್‌ ಕೊನೆಯದಾಗಿ ಇಂದೋರ್‌ನಲ್ಲಿ ತನ್ನ ಹೊಸ ಘಟಕವನ್ನು ತೆರೆಯಲು ₹350 ಕೋಟಿ ಹೂಡಿಕೆ ಮಾಡಿತ್ತು ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT