ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆರ್ಥಿಕವಾಗಿ ಸಾಕ್ಷರರಾಗಲಿ ಎಂದು ಪೋಷಕರು ಬಯಸುವುದಿದೆ. ಪಾಲಕರು ತಮ್ಮ ಮಕ್ಕಳಿಗೆ 18 ವರ್ಷ ವಯಸ್ಸಾಗುವ ಮೊದಲೇ ಅವರ ಹೆಸರಿನಲ್ಲಿ ಡಿ–ಮ್ಯಾಟ್ ಖಾತೆ ತೆರೆದು, ಅವರಿಗೆ ಹೂಡಿಕೆಗಳ ಜಗತ್ತನ್ನು ತೋರಿಸಿಕೊಡಲು ಅವಕಾಶ ಇದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳ ಪ್ರಕಾರ, ದೇಶದ ಷೇರುಪೇಟೆಗಳಲ್ಲಿ 18 ವರ್ಷ ವಯಸ್ಸಿನೊಳಗಿನ ಮಕ್ಕಳು ಪಾಲ್ಗೊಳ್ಳಲು ಅವಕಾಶ ಇದೆ. ಮಕ್ಕಳ ಪಾಲಕರು ಅಥವಾ ಪೋಷಕರು ಡಿ–ಮ್ಯಾಟ್ ಖಾತೆ ಹೊಂದಿರಬೇಕು. ಅವರು ತಮ್ಮ ಮಕ್ಕಳ ಹೆಸರಿನಲ್ಲಿ ಡಿ–ಮ್ಯಾಟ್ ಖಾತೆಯನ್ನು ತೆರೆದು ವಹಿವಾಟು ನಡೆಸಬಹುದು. ಆದರೆ, ಈ ಖಾತೆ ಮೂಲಕ ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಮಾತ್ರ ಹೂಡಿಕೆ ಮಾಡಬಹುದಾಗಿದೆ. ಐಪಿಒ ಹೂಡಿಕೆಗೂ ಅವಕಾಶವಿದೆ. ಇಂಟ್ರಾಡೇ, ಎಫ್ಆ್ಯಂಡ್ಒ ವಹಿವಾಟುಗಳಲ್ಲಿ ತೊಡಗಲು ಅವಕಾಶ ಇಲ್ಲ.

ಡಿ–ಮ್ಯಾಟ್ ಖಾತೆ ತೆರೆಯಲು ಮಕ್ಕಳ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಅಗತ್ಯ. ಪೋಷಕರು ಸಹ ಪಾನ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಹೊಂದಿರಬೇಕು.

ಈ ಖಾತೆ ಹೊಂದಿರುವ ಮಕ್ಕಳ ಖಾತೆಗೆ ಉಡುಗೊರೆ (ಗಿಫ್ಟ್) ರೂಪದಲ್ಲಿ ಷೇರುಗಳನ್ನು ನೀಡಬಹುದಾಗಿದೆ. ಇತ್ತೀಚೆಗೆ ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ತಮ್ಮ ಮೊಮ್ಮಗನ ಹೆಸರಿಗೆ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ, ಕುಟುಂಬದ ಸದಸ್ಯರ ನಡುವೆ ಷೇರುಗಳ ವರ್ಗಾವಣೆಗೆ ಕೂಡ ಅವಕಾಶ ಇದೆ.

ಈ ಖಾತೆಗಳು ಮಕ್ಕಳ ಹೆಸರಿನಲ್ಲಿ ಇದ್ದರೂ, ಅದರ ನಿರ್ವಹಣೆ ಪಾಲಕದ್ದಾಗಿರುತ್ತದೆ. ಒಂದು ವೇಳೆ ಮಕ್ಕಳ ತಂದೆ–ತಾಯಿ ಇಲ್ಲದಿದ್ದಲ್ಲಿ, ನ್ಯಾಯಾಲಯ ನೇಮಕ ಮಾಡಿರುವ ಪೋಷಕರು ಖಾತೆ ತೆರೆದು ವಹಿವಾಟು ನಡೆಸಬಹುದು.

ಮಕ್ಕಳು, 18 ವರ್ಷ ವಯಸ್ಸಿಗೆ ಬರುವವರೆಗೂ ಪೋಷಕರು/ಪಾಲಕರು ಈ ಖಾತೆಯನ್ನು ನಿರ್ವಹಣೆ ಮಾಡುತ್ತಾ ಇರುತ್ತಾರೆ. ಬಳಿಕ, ಈ ಖಾತೆ ನಿಷ್ಕ್ರಿಯವಾಗುತ್ತದೆ. ಅದಾದ ಬಳಿಕ, ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪ್ರಕ್ರಿಯೆಯ ಮೂಲಕ ಮಕ್ಕಳ ಖಾತೆಯನ್ನು (ಮೈನರ್ ಖಾತೆ) ವಯಸ್ಕರ ಖಾತೆಯನ್ನಾಗಿ ಪರಿವರ್ತಿಸಿಕೊಂಡು, ವಹಿವಾಟು ನಡೆಸಬಹುದಾಗಿದೆ.

ಖಾತೆ ಏಕೆ ಬೇಕು:

ಸಣ್ಣ ವಯಸ್ಸಿನಲ್ಲೇ ಈ ರೀತಿ ಡಿ–ಮ್ಯಾಟ್ ಖಾತೆ ತೆರದು ಹೂಡಿಕೆ ಮಾಡುವುದಿರಂದ ಹೂಡಿಕೆಗಳ ದೀರ್ಘಾವಧಿಯ ಪ್ರಯೋಜನ ಪಡೆಯಲು ಅವಕಾಶ ಸಿಗುತ್ತದೆ. ಜೊತೆಗೆ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಯಲು ಸಹಾಯ ಆಗುತ್ತದೆ.

ಈ ವಹಿವಾಟಿನಿಂದ ಪಡೆದ ಗಳಿಕೆಗೆ ಮಕ್ಕಳು ಆದಾಯ ತೆರಿಗೆ ವಿವರವನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾಗಿಲ್ಲ. ಪಾಲಕರು ಅಥವಾ ಪೋಷಕರು ಇದರ ನಿರ್ವಹಣೆ ಮಾಡುತ್ತಿರುವುದರಿಂದ ಅವರ ಹೆಸರಿನಲ್ಲಿ ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.