ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್‌ಗಳ ಕರ್ತವ್ಯ, ವಿಶ್ರಾಂತಿ ಸಲುವಾಗಿ ಜೂನ್‌ 1ರಿಂದ ಹೊಸ ನಿಯಮ ಜಾರಿ

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ
Published 16 ಮಾರ್ಚ್ 2024, 14:45 IST
Last Updated 16 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ನವದೆಹಲಿ: ಪೈಲಟ್‌ಗಳ ಕರ್ತವ್ಯ ಹಾಗೂ ವಿಶ್ರಾಂತಿ ಕುರಿತಂತೆ ರೂಪಿಸಿರುವ ಪರಿಷ್ಕೃತ ನಿಯಮಾವಳಿಗಳನ್ನು ವಿಮಾನಯಾನ ಕಂಪನಿಗಳು ಜೂನ್‌ 1ರಿಂದ ಕಡ್ಡಾಯವಾಗಿ ಜಾರಿಗೊಳಿಸಬೇಕಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ. 

ನಿಯಮಾವಳಿಗಳ ಜಾರಿಗೆ ನಿಗದಿಪಡಿಸಿರುವ ದಿನಾಂಕವನ್ನು ಮತ್ತೆ ವಿಸ್ತರಿಸುವುದಿಲ್ಲ. ಹಾಗಾಗಿ, ಏಪ್ರಿಲ್‌ 15ರೊಳಗೆ ಕಂಪನಿಗಳಿಂದ ಸಿದ್ಧಪಡಿಸಿರುವ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಬೇಕಿದೆ ಎಂದು ಹೇಳಿದೆ.

ವಿಮಾನಗಳ ಹಾರಾಟ ಅವಧಿಯ ಹೆಚ್ಚಳದಿಂದಾಗಿ ಒತ್ತಡಕ್ಕೆ ಸಿಲುಕುತ್ತಿದ್ದ ಪೈಲಟ್‌ಗಳಿಗೆ ವಿಶ್ರಾಂತಿ ಸಿಗುತ್ತಿರಲಿಲ್ಲ. ಹಾಗಾಗಿ, ಮುಂಜಾಗ್ರತೆಯಾಗಿ ಅವಘಡಗಳನ್ನು ತಡೆಯುವ ಉದ್ದೇಶದಿಂದ ಪೈಲಟ್‌ಗಳ ವಿಶ್ರಾಂತಿ ಅವಧಿಗೆ ಸಂಬಂಧಿಸಿದಂತೆ ಜನವರಿ 8ರಂದು ಡಿಜಿಸಿಎ ಪರಿಷ್ಕೃತ ನಿಯಮಾವಳಿಗಳನ್ನು ಪ್ರಕಟಿಸಿತ್ತು. ‌

ಆದರೆ, ಈ ನಿಯಮಾವಳಿಗಳ ಜಾರಿಗೆ ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಮತ್ತು ಇಂಡಿಗೊ ಕಂಪನಿಯು ಹೆಚ್ಚಿನ ಸಮಯಾವಕಾಶ ಕೋರಿದ್ದವು.

ಪರಿಷ್ಕೃತ ನಿಯಮಾವಳಿಗಳ ಅನ್ವಯ ಪೈಲಟ್‌ಗಳಿಗೆ ಈಗಿರುವ ವಾರದ ವಿಶ್ರಾಂತಿ ಅವಧಿಯನ್ನು 36 ಗಂಟೆಯಿಂದ 48 ಗಂಟೆವರೆಗೆ ಹೆಚ್ಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ನಿಯಮಾವಳಿಗಳ ಜಾರಿ ಕುರಿತಂತೆ ತ್ರೈಮಾಸಿಕಕ್ಕೊಮ್ಮೆ ಡಿಜಿಸಿಎಗೆ ವರದಿ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT