ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

Last Updated 16 ಜನವರಿ 2022, 12:14 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್ ಜುವೆಲ್ಸ್‌ ಕಂಪನಿಯು ಸಂಕ್ರಾಂತಿ ಹಬ್ಬದ ಅಂಗವಾಗಿ ಸೂರ್ಯನ ಕಿರಣಗಳಿಂದ ಪ್ರೇರಿತವಾದ ವಿಶೇಷ ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ವಜ್ರದ ಕಲೆಕ್ಷನ್‌ನಲ್ಲಿ ಪ್ರತಿ ಆಭರಣವನ್ನೂ ಅತ್ಯಂತ ಕಾಳಜಿಯಿಂದ ವಿನ್ಯಾಸ ಮಾಡಲಾಗಿದ್ದು, ಇವು ಸೂರ್ಯನ ಕಿರಣಗಳನ್ನು ನೆನಪಿಸುತ್ತವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವೈಯಕ್ತಿಕ ಆಭರಣಗಳ ಸಂಗ್ರಹಕ್ಕೆ ಹೊಸ ಸೇರ್ಪಡೆ ಇದಾಗಿದೆ. ದೇಶದಾದ್ಯಂತ ಇರುವ ರಿಲಯನ್ಸ್ ಜುವೆಲ್ಸ್‌ ಷೋರೂಂಗಳಲ್ಲಿ ಮತ್ತು ಜಾಲತಾಣದಲ್ಲಿ ಲಭ್ಯವಿದೆ ಎಂದು ಕಂಪನಿಯು ಹೇಳಿದೆ.

ಫೆಬ್ರುವರಿ 14ರವರೆಗೆ ನಡೆಯಲಿರುವ ‘ಡ್ರೀಮ್‌ ಡೈಮಂಡ್‌ ಸೇಲ್‌’ನಲ್ಲಿ ವಜ್ರದ ಉತ್ಪನ್ನಗಳ ಇನ್‌ವಾಯ್ಸ್‌ ಮೌಲ್ಯದ ಮೇಲೆ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತದೆ. ಚಿನ್ನದ ಆಭರಣಗಳ ಮೇಲೆ ಶೇ 25ವರೆಗೆ ಮೇಕಿಂಗ್‌ ಚಾರ್ಜ್‌ನಲ್ಲಿ ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT