ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023–24ನೇ ಆರ್ಥಿಕ ವರ್ಷದಲ್ಲಿ 42 ಲಕ್ಷ ಪ್ರಯಾಣಿಕ ವಾಹನ ಮಾರಾಟ: ಎಸ್‌ಐಎಎಂ

Published 12 ಏಪ್ರಿಲ್ 2024, 14:21 IST
Last Updated 12 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ 8.4ರಷ್ಟು ಏರಿಕೆಯಾಗಿದೆ. ಒಟ್ಟು 42.18 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

2022–23ನೇ ಆರ್ಥಿಕ ವರ್ಷದಲ್ಲಿ ಒಟ್ಟು 38.90 ಲಕ್ಷ ವಾಹನಗಳು ಮಾರಾಟವಾಗಿದ್ದವು. ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಶೇ 13.3ರಷ್ಟು ಏರಿಕೆಯಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ 1.58 ಕೋಟಿ ದ್ವಿಚಕ್ರ ವಾಹನ ಮಾರಾಟವಾಗಿದ್ದರೆ, 2023–24ರಲ್ಲಿ 1.79 ಕೋಟಿ ಮಾರಾಟವಾಗಿವೆ ಎಂದು ತಿಳಿಸಿದೆ.

2022–23ರಲ್ಲಿ 20.03 ಲಕ್ಷ ಯುಟಿಲಿಟಿ ವಾಹನಗಳು ಮಾರಾಟವಾಗಿದ್ದರೆ, 2023–24ರಲ್ಲಿ 25.20 ಲಕ್ಷ ಮಾರಾಟವಾಗಿವೆ. ಒಟ್ಟಾರೆ ಮಾರಾಟದಲ್ಲಿ ಶೇ 25.8ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.

ಆದರೆ, ವಾಹನಗಳ ರಫ್ತಿನಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ. 2022–23ರಲ್ಲಿ 47.61 ವಾಹನಗಳನ್ನು ರಫ್ತು ಮಾಡಲಾಗಿತ್ತು. 2023–24ರಲ್ಲಿ 45 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಹೇಳಿದೆ.

‘ಸರ್ಕಾರದ ದೃಢವಾದ ವಿತ್ತೀಯ ನೀತಿಯಿಂದಾಗಿ ದೇಶದ ಆಟೊಮೊಬೈಲ್‌ ಕೈಗಾರಿಕಾ ಕ್ಷೇತ್ರದ ಸಾಮರ್ಥ್ಯವು ತೃಪ್ತಿಕರವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶೀಯ ಕೈಗಾರಿಕಾ ಬೆಳವಣಿಗೆಯು ಶೇ 12.5ರಷ್ಟು ಏರಿಕೆಯಾಗಿದೆ’ ಎಂದು ಎಸ್‌ಐಎಎಂನ ಅಧ್ಯಕ್ಷ ವಿನೋದ್‌ ಅಗರ್ವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT