ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಡ್ರೀಮ್‌11 ಕಾರ್ಯಾಚರಣೆ ಅಮಾನತು

Last Updated 10 ಅಕ್ಟೋಬರ್ 2021, 14:00 IST
ಅಕ್ಷರ ಗಾತ್ರ

ಬೆಂಗಳೂರು: ಡ್ರೀಮ್11 ಕಂಪನಿಯು ಕರ್ನಾಟಕದಲ್ಲಿನ ತನ್ನ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸಿದೆ. ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು, ಆನ್‌ಲೈನ್‌ ಮೂಲಕ ನಡೆಯುವ ಜೂಜನ್ನು ನಿಷೇಧಿಸಿದ ನಂತರದಲ್ಲಿ ಕಂಪನಿಯು ಈ ತೀರ್ಮಾನ ಕೈಗೊಂಡಿದೆ.

‘ಆನ್‌ಲೈನ್‌ ಮೂಲಕ ನಡೆಯುವ ಜೂಜು, ಬೆಟ್ಟಿಂಗ್ ಚಟುವಟಿಕೆಗಳನ್ನು ನಿಷೇಧಿಸಿ ಕರ್ನಾಟಕದಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಈ ತಿದ್ದುಪಡಿಯು ತನ್ನ ಸದಸ್ಯರು ಅಭಿವೃದ್ಧಿಪಡಿಸಿರುವ ಫ್ಯಾಂಟಸಿ ಆಟಗಳಿಗೆ ಅನ್ವಯ ಆಗುವುದಿಲ್ಲ ಎಂದು ಭಾರತೀಯ ಫ್ಯಾಂಟಸಿ ಆಟಗಳ ಸಂಘವು (ಎಫ್‌ಐಎಫ್‌ಎಸ್‌) ನಮಗೆ ಸಲಹೆ ನೀಡಿದೆ. ಈ ವಿಚಾರವಾಗಿ ಸಂಘವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದೆ’ ಎಂದು ಡ್ರೀಮ್‌11 ಹೇಳಿದೆ.

‘ಎಫ್‌ಐಎಫ್‌ಎಸ್‌ ಅಭಿವೃದ್ಧಿಪಡಿಸುವ ಫ್ಯಾಂಟಸಿ ಆಟದ ಮಾದರಿಗಳು ಜೂಜು, ಬೆಟ್ಟಿಂಗ್ ಅಲ್ಲ ಎಂದು ದೇಶದ ನ್ಯಾಯಾಲಯಗಳು ಹೇಳಿವೆ. ಹೀಗಿದ್ದರೂ, ಈಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ, ಪ್ರಸಾರವಾದ ಕೆಲವು ವರದಿಗಳನ್ನು ಗಮನಿಸಿ ಕರ್ನಾಟಕದಲ್ಲಿನ ನಮ್ಮ ಬಳಕೆದಾರರು ತೀವ್ರ ಕಳವಳ ಮತ್ತು ತಮ್ಮ ಸುರಕ್ಷತೆ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅವರ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ನಾವು ಕರ್ನಾಟಕದಲ್ಲಿನ ನಮ್ಮ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸುತ್ತಿದ್ದೇವೆ’ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT