ನವದೆಹಲಿ (ಪಿಟಿಐ): ‘ಒಂದು ವರ್ಷದೊಳಗೆ ರಾಷ್ಟ್ರೀಯ ಇ–ಕಾಮರ್ಸ್ ನೀತಿ ಜಾರಿಗೆ ಬರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಷೇರುದಾರರು ಮತ್ತು ಇ–ಕಾಮರ್ಸ್ ಕಂಪನಿಗಳೊಂದಿಗೆ ಎರಡನೇ ಬಾರಿಗೆ ಸಭೆ ನಡೆಸಿದ ಅವರು ಈ ಮಾಹಿತಿ ನೀಡಿ
ದ್ದಾರೆ. ಇ–ಕಾಮರ್ಸ್ ನೀತಿ ಜಾರಿಗೆ ತರಲು ಸಾಂಸ್ಥಿಕ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗಡಿಯಾಚೆಗೆ ದತ್ತಾಂಶ ಹರಿವು ನಿಯಂತ್ರಿಸಲು ಕಾನೂನು ಮತ್ತು ತಾಂತ್ರಿಕ ಚೌಕಟ್ಟು ರೂಪಿಸುವ ಸಲುವಾಗಿ ರಾಷ್ಟ್ರೀಯ ಇ–ಕಾಮರ್ಸ್ ಕರಡು ನೀತಿ ಯನ್ನುಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಉದ್ಯಮಗಳು ಸೂಕ್ಷ್ಮವಾದ ದತ್ತಾಂಶಗಳನ್ನು ಸ್ಥಳೀಯವಾಗಿ ಸಂಗ್ರಹಿಸುವ ಮತ್ತು ವಿದೇಶದಲ್ಲಿ ದಾಸ್ತಾನು ಮಾಡುವುದನ್ನು ನಿರ್ಬಂಧಿ ಸಲೂ ಇದು ನೆರವಾಗಲಿದೆ.

ಕರಡು ನೀತಿಯಲ್ಲಿನ ಕೆಲವು ಅಂಶ ಗಳ ಬಗ್ಗೆ ಹಲವು ವಿದೇಶಿ ಇ–ಕಾಮರ್ಸ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ವ್ಯಾಪ್ತಿಯಡಿ ಆಂತರಿಕ ಸಚಿವಾಲಯದ ತಂಡ ರಚನೆ ಮಾಡಲಾಗುವುದು. ಇದು ಎಫ್‌ಡಿಐ ಮತ್ತು ಇ–ಕಾಮರ್ಸ್ ಕರಡು ನೀತಿಯ ಕುರಿತಾಗಿ ಷೇರುದಾರರಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲಿದೆ.

ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್, ಪೇಟಿಎಂ, ಇ–ಬೇ, ಮೇಕ್ ಮೈಟ್ರಿಪ್, ಸ್ವಿಗ್ಗಿ ಮತ್ತು ಇನ್ನೂ ಕೆಲವು ಇ–ಕಾಮರ್ಸ್ ಕಂಪನಿಗಳ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.