ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಶೇ 16.8

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಪ್ರಮುಖ ಎಂಟು ಕೈಗಾರಿಕಾ ವಲಯಗಳ ಬೆಳವಣಿಗೆಯು ಮೇ ತಿಂಗಳಿನಲ್ಲಿ ಶೇಕಡ 16.8ರಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳ ಉತ್ಪಾದನೆ ಹೆಚ್ಚಳ ಆಗಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ರಸಗೊಬ್ಬರ ಮತ್ತು ಕಚ್ಚಾತೈಲ ವಲಯಗಳು ಮಾತ್ರವೇ ಮೇ ತಿಂಗಳಿನಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿವೆ.

ಈ ಎಂಟು ವಲಯಗಳು ಮಾರ್ಚ್‌ನಲ್ಲಿ ಶೇ 11.4ರಷ್ಟು ಮತ್ತು ಏಪ್ರಿಲ್‌ನಲ್ಲಿ ಶೇ 60.9ರಷ್ಟು ಬೆಳವಣಿಗೆ ಕಂಡಿದ್ದವು. ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸಲು ಲಾಕ್‌ಡೌನ್ ಹೇರಿದ್ದರಿಂದ 2020ರ ಮೇ ತಿಂಗಳಿನಲ್ಲಿ ಎಂಟು ವಲಯಗಳ ಬೆಳವಣಿಗೆಯು ಶೇ (–)21.4ರಷ್ಟು ಆಗಿತ್ತು.

ಏ‍ಪ್ರಿಲ್‌–ಮೇ ಅವಧಿಯಲ್ಲಿ ಈ ವಲಯಗಳು ಶೇ 35.8ರಷ್ಟು ಬೆಳವಣಿಗೆ ಸಾಧಿಸಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ (–) 29.4ರಷ್ಟು ಕುಸಿದಿದ್ದವು.

‘ಎಂಟು ಪ್ರಮುಖ ವಲಯಗಳ ಅಂಕಿ–ಅಂಶ, ಆಟೊಮೊಬೈಲ್‌ ಉತ್ಪಾದನೆ, ರಫ್ತು ಮತ್ತು ಜಿಎಸ್‌ಟಿ ಇ–ವೇ ಬಿಲ್‌ ಸಂಖ್ಯೆಯನ್ನು ಗಮನಿಸಿ ಹೇಳುವುದಾದರೆ, ಮೇ ತಿಂಗಳಿನಲ್ಲಿ ಐಐಪಿ (ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ) ಬೆಳವಣಿಗೆ ಪ್ರಮಾಣವು ಶೇ 20 ಅಥವಾ ಶೇ 25ಕ್ಕೆ ತಲುಪಬಹುದು’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು