ನವದೆಹಲಿ: ‘ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ 22 ಹೊಸ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಈ ಪ್ರಸ್ತಾವಕ್ಕೆ ₹41,863 ಕೋಟಿ ಅಂದಾಜು ಹೂಡಿಕೆ ಮಾಡಲಿದ್ದು, ₹2,58,152 ಕೋಟಿ ಮೌಲ್ಯದ ಸರಕುಗಳನ್ನು ತಯಾರಿಸುವ ಅಂದಾಜು ಮಾಡಲಾಗಿದೆ.

ಡಿಕ್ಸನ್, ಸ್ಯಾಮ್ಸಂಗ್ ಡಿಸ್ಪ್ಲೇ ನೋಯ್ಡಾ ಪ್ರೈವೆಟ್ ಲಿಮಿಟೆಡ್, ಫಾಕ್ಸ್ಕಾನ್ (ಯುಜಾನ್ ಟೆಕ್ನಾಲಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್), ಹಿಂಡಾಲ್ಕೊ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ.

ಈ ಅನುಮೋದನೆಯಿಂದ 33,791 ನೇರ ಉದ್ಯೋಗ ಅವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ. ಮೊಬೈಲ್ ಪೋನ್ಗಳ ತಯಾರಿಕೆ, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ದೂರಸಂಪರ್ಕ, ವಾಹನೋದ್ಯಮ ಮತ್ತು ಐ.ಟಿ ಹಾರ್ಡ್ವೇರ್ ಸೇರಿದಂತೆ 11 ವಿಭಾಗದ ಉತ್ಪನ್ನಗಳ ತಯಾರಿಕೆಯನ್ನು ಈ ಪ್ರಸ್ತಾವ ಒಳಗೊಂಡಿದೆ.

ದೇಶೀಯ ಪೂರೈಕೆ ಸರಪಳಿಯನ್ನು ಬಲಪಡಿಸುವುದು, ಪ್ರಮುಖ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ದೇಶದಲ್ಲಿನ ತಯಾರಿಕಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಅನುಮೋದನೆಯ ಗುರಿಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.