ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಹೆಚ್ಚಿಸಲು ಪ್ರಧಾನಿಗೆ ಮನವಿ

Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್‌ 1995) ಒಳಪಟ್ಟಿರುವವರ ಪಿಂಚಣಿ ಹೆಚ್ಚಿಸಲು ಕೇಂದ್ರ ಸರ್ಕಾರವು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪಿಂಚಣಿದಾರರ ಸಮನ್ವಯ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.

‘ಇಪಿಎಸ್‌–1995’ ಯೋಜನೆಯಡಿ ನಿವೃತ್ತರ ಪಿಂಚಣಿಯನ್ನು ಅವೈಜ್ಞಾನಿಕವಾಗಿ ಅತ್ಯಂತ ಕಡಿಮೆ ಮೊತ್ತಕ್ಕೆ ನಿಗದಿಪಡಿಸಲಾಗಿದೆ. ಈ ಮೊತ್ತವು ಕನಿಷ್ಠ ₹ 1,000 ದಿಂದ ಗರಿಷ್ಠ ₹ 3,000ವರೆಗೆ ಮಾತ್ರ ಇದೆ. ಈ ಮೊತ್ತದಿಂದ ನಿವೃತ್ತರು ಜೀವನ ನಿರ್ವಹಿಸುವುದೇ ದುಸ್ತರವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ’ ಎಂದು ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಶಾಮ ರಾವ್‌ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿನ ವೃದ್ಧಾಪ್ಯ ವೇತನವು ‘ಇಪಿಎಸ್‌’ ಪಿಂಚಣಿಗಿಂತ ಹೆಚ್ಚಿಗೆ ಇದೆ. ಸದ್ಯದ ದುಬಾರಿ ಜೀವನಮಟ್ಟದಲ್ಲಿ ಈ ಅಲ್ಪ ಮೊತ್ತದ ಪಿಂಚಣಿಯಿಂದ ನಿವೃತ್ತರು ಬದುಕು ನಿರ್ವಹಿಸುವುದೇ ದುಸ್ತರವಾಗಿದೆ. ಇತರ ಪಿಂಚಣಿದಾರರು ಪಡೆಯುತ್ತಿರುವ ತುಟ್ಟಿಭತ್ಯೆ (ಡಿ.ಎ) ಪ್ರಯೋಜನದಿಂದ ‘ಇಪಿಎಸ್‌’ ಪಿಂಚಣಿದಾರರು ವಂಚಿತರಾಗಿದ್ದಾರೆ. ಬೆಲೆ ಏರಿಕೆ, ದುಬಾರಿ ವೈದ್ಯಕೀಯ ವೆಚ್ಚ, ಇತರರ ಮೇಲಿನ ಅವಲಂಬನೆ ಮತ್ತಿತರ ಕಾರಣಗಳಿಗೆ ಪಿಂಚಣಿದಾರರ ಸಂಕಷ್ಟಗಳು ಹೆಚ್ಚಿವೆ. ಪಿಂಚಣಿದಾರರ ನ್ಯಾಯೋಚಿತ ಹಕ್ಕೊತ್ತಾಯ ಈಡೇರಿಸುವ ಭರವಸೆಯನ್ನು ಕಾರ್ಯಗತಗೊಳಿಸಲು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT