ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇ: 100ಕ್ಕೆ ತಲುಪಿದ ಇಟಿಎಫ್‌ಗಳ ಸಂಖ್ಯೆ!

ಒಂದೇ ವರ್ಷದಲ್ಲಿ 21 ಇಟಿಎಫ್‌ಗಳ ಪ್ರವೇಶ
Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ಇದುವರೆಗೆ ಒಟ್ಟು 100 ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳು ಪ್ರವೇಶ ಪಡೆದಿವೆ ಎಂದು ಎನ್‌ಎಸ್‌ಸಿ ಸೋಮವಾರ ತಿಳಿಸಿದೆ. 2002ರಲ್ಲಿ ಎನ್‌ಎಸ್‌ಇಯಲ್ಲಿ ಮೊದಲ ಇಟಿಎಫ್‌ ಪ್ರವೇಶ ಪಡೆದಿತ್ತು.

‘ಒಟ್ಟು 100 ಇಟಿಎಫ್‌ಗಳು ಎನ್‌ಎಸ್‌ಇಯಲ್ಲಿ ಪ್ರವೇಶ ಪಡೆಯಲು 19 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಯಿತು. ಈ ಪೈಕಿ, ಕಳೆದ ಒಂದೇ ವರ್ಷದಲ್ಲಿ ಒಟ್ಟು 21 ಇಟಿಎಫ್‌ಗಳು ಎನ್‌ಎಸ್‌ಇ ಪ್ರವೇಶಿಸಿವೆ’ ಎಂದು ಪ್ರಕಟಣೆ ತಿಳಿಸಿದೆ.

ಮೇ ತಿಂಗಳವರೆಗಿನ ಮಾಹಿತಿ ಅನ್ವಯ ದೇಶದಲ್ಲಿ ಇಟಿಎಫ್‌ಗಳ ಮೂಲಕ ಆಗಿರುವ ಹೂಡಿಕೆಯ ಮೌಲ್ಯವು ₹ 3.16 ಲಕ್ಷ ಕೋಟಿ. 2016ರ ಏಪ್ರಿಲ್‌ ವೇಳೆಗೆ ದೇಶದ ಇಟಿಎಫ್‌ಗಳಲ್ಲಿ ₹ 23 ಸಾವಿರ ಕೋಟಿ ಹೂಡಿಕೆ ಆಗಿತ್ತು. ಅಂದರೆ, ಐದು ವರ್ಷಗಳಲ್ಲಿ ಹೂಡಿಕೆ ಆಗಿರುವ ಮೌಲ್ಯದಲ್ಲಿ 13.8 ಪಟ್ಟು ಹೆಚ್ಚಳ ಆಗಿದೆ.

‘ಭಾರತದಲ್ಲಿ ಸಣ್ಣ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕುಟುಂಬಗಳು ಉಳಿತಾಯ ಮಾಡುವ ಮೊತ್ತವು ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಆಗುವಂತೆ ಮಾಡಿ, ಬಂಡವಾಳ ಸೃಷ್ಟಿಸಿಕೊಡುವುದು ನಮ್ಮ ಮುಖ್ಯ ಗುರಿಗಳಲ್ಲಿ ಒಂದು. ಇಟಿಎಫ್‌ಗಳು ಬಹಳ ಸರಳವಾದ ಹಾಗೂ ಕಡಿಮೆ ಖರ್ಚಿನ ಹೂಡಿಕೆ ಉತ್ಪನ್ನಗಳು. ಪಿಂಚಣಿ ನಿಧಿಗಳು, ಕೇಂದ್ರ ಸರ್ಕಾರ ಕೂಡ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿವೆ’ ಎಂದು ಎನ್‌ಎಸ್‌ಇ ಮುಖ್ಯ ಕಾರ್ಯನಿರ್ವಹಣಾಅಧಿಕಾರಿ ವಿಕ್ರಂ ಲಿಮಯೆ ಹೇಳಿದ್ದಾರೆ. 

ಇಟಿಎಫ್‌ನಲ್ಲಿ ಹೂಡಿಕೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರೈಮ್‌ಇನ್ವೆಸ್ಟರ್‌ ಸಂಸ್ಥೆಯ ಸಹಸಂಸ್ಥಾಪಕಿ ವಿದ್ಯಾ ಬಾಲಾ, ‘ಇಟಿಎಫ್‌ನಲ್ಲಿನ ಹೂಡಿಕೆ ಕಡಿಮೆ ಖರ್ಚಿನದು ಎಂಬ ಮಾತ್ರಕ್ಕೆ ಅದು ಉತ್ತಮ ಎಂದಾಗುವುದಿಲ್ಲ. ಹೂಡಿಕೆಯಿಂದ ಎಷ್ಟು ಲಾಭ ಸಿಗುತ್ತದೆ, ಸೂಚ್ಯಂಕ ಯಾವ ರೀತಿ ವರ್ತಿಸುತ್ತದೆ, ನಿಮ್ಮ ಒಟ್ಟಾರೆ ಹೂಡಿಕೆಗಳಲ್ಲಿ ಇಟಿಎಫ್‌ ಯಾವ ಪಾತ್ರ ವಹಿಸುತ್ತದೆ ಎಂಬುದನ್ನೆಲ್ಲ ಗಮನಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT