ಮುಂಬೈ: ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಮಾರಾಟ ದೇಶದಲ್ಲಿ ಜೂನ್ ತಿಂಗಳಿನಲ್ಲಿ ಶೇಕಡ 28ರಷ್ಟು ಏರಿಕೆಯಾಗಿದೆ. 1,80,238 ವಾಹನಗಳು ಮಾರಾಟವಾಗಿವೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್ಎಡಿಎ) ಮಂಗಳವಾರ ತಿಳಿಸಿದೆ.

ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 80ರಷ್ಟು ಹೆಚ್ಚಳವಾಗಿದೆ. ಒಟ್ಟು 13,178 ವಾಹನಗಳು ಮಾರಾಟವಾಗಿವೆ. 2024ರ ಜೂನ್ನಲ್ಲಿ 7,323 ವಾಹನಗಳು ಮಾರಾಟವಾಗಿದ್ದವು.

ವಿದ್ಯುತ್ ಚಾಲಿತ ವಾಹನಗಳ ಒಟ್ಟು ಮಾರಾಟದ ಪೈಕಿ ಪ್ರಯಾಣಿಕ ವಾಹನಗಳ ಮಾರಾಟದ ಪಾಲು ಶೇ 4.4ರಷ್ಟು ಇದೆ. ಕಳೆದ ಜೂನ್ನಲ್ಲಿ ಶೇ 2.5ರಷ್ಟಿತ್ತು. ಒಟ್ಟು 60,559 ಇ.ವಿ ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ಜೂನ್ 25ರ ವೇಳೆಗೆ ದ್ವಿಚಕ್ರ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ 31ರಷ್ಟು ಏರಿಕೆಯಾಗಿದೆ. 1,146 ವಾಣಿಜ್ಯ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.

‘ಪಿಎಂ ಇ–ಡ್ರೈವ್ ಯೋಜನೆಯಿಂದ ಇ.ವಿ ವಾಹನಗಳು ಕೈಗೆಟಕುವಂತಾಗಿದೆ. ಅಲ್ಲದೆ, ಇ.ವಿ ತಂತ್ರಜ್ಞಾನದ ಬಗ್ಗೆ ಗ್ರಾಹಕರ ವಿಶ್ವಾಸ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಜಾರ್ಜಿಂಗ್ ಕೇಂದ್ರಗಳು, ದೇಶಿ ನಾವೀನ್ಯತೆ ಉತ್ತೇಜನವು ವಿದ್ಯುತ್ ಚಾಲಿತ ವಾಹನಗಳ ಮಾರಾಟ ಹೆಚ್ಚಾಗುವಂತೆ ಮಾಡಿದೆ’ ಎಂದು ಎಫ್ಎಡಿಎ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.