ಸೋಮವಾರ, ಜೂನ್ 27, 2022
24 °C

ಜೂನ್‌ ಮೊದಲ ವಾರ: ರಫ್ತು ಶೇ 52ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ರಫ್ತು ವಹಿವಾಟು ಜೂನ್‌ ತಿಂಗಳ ಮೊದಲ ವಾರದಲ್ಲಿ ಶೇಕಡ 52.39ರಷ್ಟು ಹೆಚ್ಚಾಗಿದ್ದು, ₹ 56,283 ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ತಿಳಿಸಿದೆ.

ಎಂಜಿನಿಯರಿಂಗ್‌, ಹರಳು ಮತ್ತು ಚಿನ್ನಾಭರಣ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ವಲಯವು ಉತ್ತಮ ಬೆಳವಣಿಗೆ ಕಂಡಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಅದು ಹೇಳಿದೆ.

ಕಬ್ಬಿಣದ ಅದಿರು, ಎಣ್ಣೆ ಕಾಳುಗಳು ಮತ್ತು ಸಂಬಾರ ಪದಾರ್ಥಗಳ ರಫ್ತು ವಹಿವಾಟು ನಕಾರಾತ್ಮಕ ಬೆಳವಣಿಗೆ ಕಂಡಿವೆ. ಇದೇ ಅವಧಿಯಲ್ಲಿ ಆಮದು ವಹಿವಾಟು ಶೇ 83ರಷ್ಟು ಹೆಚ್ಚಾಗಿ ₹ 66,430 ಕೋಟಿಗೆ ತಲುಪಿದೆ. ಪೆಟ್ರೋಲಿಯಂ ಮತ್ತು ಕಚ್ಚಾ ತೈಲ ಆಮದು ಶೇ 135ರಷ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್‌ ಸರಕುಗಳು, ಅತ್ಯಮೂಲ್ಯ ಹರಳುಗಳ ಆಮದು ಸಹ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು