ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತ ಸ್ಥಿತಿಯಿಂದಾಗಿ 2024–25ರ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ವಿದೇಶಿ ನೇರ ಹೂಡಿಕೆ ಪ್ರಮಾಣ ಶೇ 5.6ರಷ್ಟು ಕುಸಿದಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹95,198 ಕೋಟಿ ವಿದೇಶಿ ನೇರ ಹೂಡಿಕೆಯಾಗಿದೆ ಎಂದು ತಿಳಿಸಿದೆ.

ಜೂನ್ ತ್ರೈಮಾಸಿಕದಲ್ಲಿ ₹1.41 ಲಕ್ಷ ಕೋಟಿ ಹಾಗೂ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1.18 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂದು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ.

ಸೇವೆಗಳು, ಕಂಪ್ಯೂಟರ್ ಸಾಫ್ಟ್ವೇರ್, ಹಾರ್ಡ್ವೇರ್, ದೂರಸಂಪರ್ಕ, ಆಟೊಮೊಬೈಲ್ ಮತ್ತು ರಾಸಾಯನಿಕ ಕ್ಷೇತ್ರದಲ್ಲಿ ಒಳಹರಿವು ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ₹39,289 ಕೋಟಿ ಹೂಡಿಕೆ : ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರ ₹1.45 ಲಕ್ಷ ಕೋಟಿ ಎಫ್ಡಿಐ ಆಕರ್ಷಿಸಿದೆ. ಗುಜರಾತ್ ₹48,545 ಕೋಟಿ ಮತ್ತು ಕರ್ನಾಟಕ ₹39,289 ಕೋಟಿ ಹೂಡಿಕೆ ಸ್ವೀಕರಿಸಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.