ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಉತ್ಪಾದನೆ ಶೇ 1.7ರಷ್ಟು ಹೆಚ್ಚಳ

Last Updated 12 ಏಪ್ರಿಲ್ 2022, 15:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಫೆಬ್ರುವರಿ ತಿಂಗಳಿನಲ್ಲಿ ಶೇಕಡ 1.7ರಷ್ಟು ಹೆಚ್ಚಳ ಆಗಿದೆ. ಗಣಿಗಾರಿಕೆ ವಲಯದಲ್ಲಿ ಚಟುವಟಿಕೆಗಳು ಸುಧಾರಣೆ ಕಂಡಿದ್ದು ಈ ಏರಿಕೆಗೆ ಮುಖ್ಯ ಕಾರಣ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕವು (ಐಐಪಿ) 2021ರ ಫೆಬ್ರುವರಿಯಲ್ಲಿ ಶೇ (–) 3.2ರಷ್ಟು ಕುಸಿದಿತ್ತು. ಈ ವರ್ಷದ ಜನವರಿಯಲ್ಲಿ ಶೇ 1.5ರಷ್ಟು ಬೆಳವಣಿಗೆ ಕಂಡಿತ್ತು.

ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಗಣಿಗಾರಿಕೆ ವಲಯದಲ್ಲಿ ಫೆಬ್ರುವರಿಯಲ್ಲಿ ಶೇ 4.5ರಷ್ಟು ಬೆಳವಣಿಗೆ ಆಗಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಈ ವಲಯದಲ್ಲಿ ಶೇ (–) 4.4ರಷ್ಟು ಇಳಿಕೆ ಆಗಿತ್ತು.

ತಯಾರಿಕಾ ವಲಯವು ಫೆಬ್ರುವರಿಯಲ್ಲಿ ಶೇ 0.8ರಷ್ಟು ಬೆಳವಣಿಗೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT