ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳ

Published 23 ಜನವರಿ 2024, 13:51 IST
Last Updated 23 ಜನವರಿ 2024, 13:51 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ಆಭರಣ ತಯಾರಿಕೆಯಲ್ಲಿ ಬಳಸುವ ಪಿನ್‌, ವೈರ್‌, ಮಣಿಗಳಂತಹ ವಸ್ತುಗಳ ಮೇಲಿನ ಆಮದು ಸುಂಕವನ್ನು ಹಣಕಾಸು ಸಚಿವಾಲಯ ಶೇ 10ರಿಂದ ಶೇ 15ಕ್ಕೆ ಹೆಚ್ಚಿಸಿದೆ. ಇದಲ್ಲದೇ ಈ ಲೋಹಗಳಿಂದ ತಯಾರಿಸಿದ ನಾಣ್ಯಗಳ ಮೇಲಿನ ಕಸ್ಟಮ್ ಸುಂಕವನ್ನೂ ಹೆಚ್ಚಿಸಲಾಗಿದೆ. ಜನವರಿ 22ರಿಂದ ಅನ್ವಯ ಆಗುವಂತೆ ಇದು ಜಾರಿಗೆ ಬಂದಿದೆ. 

ಈ ಸುಂಕವು ಮೂಲ ಕಸ್ಟಮ್ ಸುಂಕ ಶೇ 10 (ಬಿಸಿಡಿ) ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ಶೇ 5 ಒಳಗೊಂಡಿರುತ್ತದೆ. ಆದರೆ, ಸಮಾಜ ಕಲ್ಯಾಣ ಸೆಸ್‌ನಿಂದ (ಎಸ್‌ಡಬ್ಲ್ಯುಎಸ್) ವಿನಾಯಿತಿ ನೀಡಲಾಗಿದೆ. 

ಮೂಲಭೂತ ಕಸ್ಟಮ್ಸ್‌ ಸುಂಕ ಶೇ 10 ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ ಶೇ 5ರಷ್ಟು ಇದರಲ್ಲಿ ಸೇರಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT