ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1,200 ಕೋಟಿ ಬಂಡವಾಳ ಸಂಗ್ರಹಿಸಲಿದೆ ಫಿನೊ ಬ್ಯಾಂಕ್

Last Updated 26 ಅಕ್ಟೋಬರ್ 2021, 16:53 IST
ಅಕ್ಷರ ಗಾತ್ರ

ಮುಂಬೈ: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಒಟ್ಟು ₹ 1,200 ಕೋಟಿ ಬಂಡವಾಳ ಸಂಗ್ರಹ ಮಾಡುವುದಾಗಿ ಫಿನೊ ಪೇಮೆಂಟ್ಸ್‌ ಬ್ಯಾಂಕ್ ಮಂಗಳವಾರ ಪ್ರಕಟಿಸಿದೆ. ಇದರಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗುವ ₹ 300 ಕೋಟಿ ಮೌಲ್ಯದ ಷೇರುಗಳೂ ಸೇರಿವೆ.

ದೇಶದ ಷೇರು ಮಾರುಕಟ್ಟೆಗಳಲ್ಲಿ ನೋಂದಾಯಿತ ಆಗಲಿರುವ ಮೊದಲ ಪೇಮೆಂಟ್ಸ್‌ ಬ್ಯಾಂಕ್‌ ಇದಾಗಲಿದೆ. ಕಂಪನಿಯು ಪ್ರತಿ ಷೇರಿಗೆ ₹ 560 – 570 ಬೆಲೆ ನಿಗದಿ ಮಾಡಿದೆ. ಐಪಿಒಗೆ ಅರ್ಜಿ ಸಲ್ಲಿಸಲು ಹೂಡಿಕೆದಾರರಿಗೆ ಅಕ್ಟೋಬರ್ 29ರಿಂದ ನವೆಂಬರ್ 2ರವರೆಗೆ ಅವಕಾಶ ಇರಲಿದೆ.

ಗ್ರಾಹಕರಿಗೆ ಉಚಿತವಾಗಿ ಏನನ್ನಾದರೂ ನೀಡುವ ವಿಚಾರದಲ್ಲಿ, ಅದಕ್ಕಾಗಿ ಹಣವನ್ನು ವಿಪರೀತವಾಗಿ ಖರ್ಚು ಮಾಡುವುದರಲ್ಲಿ ಕಂಪನಿಗೆ ನಂಬಿಕೆ ಇಲ್ಲ ಎಂದು ಫಿನೊ ಪೇಮೆಂಟ್ಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿಷಿ ಗುಪ್ತ ಹೇಳಿದ್ದಾರೆ. ತಮ್ಮ ಬ್ಯಾಂಕ್‌ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಲಾಭದಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಭಾರತ್‌ ಪೆಟ್ರೋಲಿಯಂ, ಐಸಿಐಸಿಐ ಸಮೂಹ, ಬ್ಲಾಕ್‌ಸ್ಟೋನ್‌ ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿವೆ. ಈ ಬ್ಯಾಂಕ್‌ ಪ್ರತಿದಿನ 6,200 ಹೊಸ ಖಾತೆಗಳನ್ನು ತೆರೆಯುತ್ತಿದೆ. ಇಲ್ಲಿ ಖಾತೆ ಹೊಂದಿರುವವರು ವಾರ್ಷಿಕ ₹ 499 ನಿರ್ವಹಣಾ ಶುಲ್ಕ ಪಾವತಿಸಬೇಕು.

ಐಪಿಒ ಮೂಲಕ ಷೇರು ಖರೀದಿಸುವವರು ಕನಿಷ್ಠ 25 ಷೇರುಗಳಿಗೆ ಬಿಡ್ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT