ಶುಕ್ರವಾರ, ಅಕ್ಟೋಬರ್ 18, 2019
20 °C

ಮೊದಲ ಹಂತದ ಸಾಲ ಮೇಳ ಇಂದಿನಿಂದ

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 250 ಜಿಲ್ಲೆಗಳಲ್ಲಿ ಗುರುವಾರದಿಂದ ಮೊದಲ ಹಂತದ ಸಾಲ ಮೇಳ ನಡೆಸಲಿವೆ.

ಅಕ್ಟೋಬರ್‌ 3 ರಿಂದ ನಾಲ್ಕು ದಿನಗಳವರೆಗೆ ಮನೆ ಖರೀದಿಸುವವರು, ಮಧ್ಯಮ–ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು (ಎಂಎಸ್‌ಎಂಇ) ಹಾಗೂ ರೈತರಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡಲಿವೆ.

ಮುಖ್ಯವಾಗಿ ಎಸ್‌ಬಿಐ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳು ಹಬ್ಬದ ಬೇಡಿಕೆಯ ಪ್ರಯೋಜನ ಪಡೆದುಕೊಳ್ಳಲು ಈ ಸಾಲ ಮೇಳದಲ್ಲಿ ಭಾಗವಹಿಸಲಿವೆ.

ಎರಡನೇ ಹಂತವು ಅಕ್ಟೋಬರ್ 21 ರಿಂದ 25ರ ಆಸುಪಾಸಿನಲ್ಲಿ 150 ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Post Comments (+)