ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಿತ ಠೇವಣಿಗೆ ಯಾವ್ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ

Last Updated 8 ಮೇ 2019, 9:30 IST
ಅಕ್ಷರ ಗಾತ್ರ

ಬೆಂಗಳೂರು:ಹಣ ಉಳಿತಾಯ, ತೆರಿಗೆ ವಿನಾಯ್ತಿ, ಹೀಗೆ ಹಲವು ಉದ್ದೇಶಗಳಿಗಾಗಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡಿಪಾಸಿಟ್) ಇಡಲು ಯೋಚಿಸಿದ್ದೀರಾ? ನಿಶ್ಚಿತ ಠೇವಣಿಗೆ 2019ರಲ್ಲಿ ಯಾವ್ಯಾವ ಬ್ಯಾಂಕ್‌ಗಳು ಎಷ್ಟೆಷ್ಟು ಬಡ್ಡಿ ನಿಗದಿಪಡಿಸಿವೆ ಎಂಬ ಮಾಹಿತಿ ಇಲ್ಲಿದೆ. ಹಿರಿಯ ನಾಗರಿಕರನಿಶ್ಚಿತ ಠೇವಣಿಗೆ ಹೆಚ್ಚು ಬಡ್ಡಿ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಸ್‌ಬಿಐನಲ್ಲಿ₹2 ಕೋಟಿಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ. ಇದು 2019ರ ಫೆಬ್ರುವರಿ 22ರಿಂದ ಜಾರಿಯಲ್ಲಿದೆ.

ಅವಧಿ ಸಾಮಾನ್ಯ ವರ್ಗ (%) ಹಿರಿಯ ನಾಗರಿಕರು(%)
1–2 ವರ್ಷ 6.80 7.30
2–3 ವರ್ಷ 6.80 7.30
3–5ವರ್ಷ 6.80 7.30
5–10 ವರ್ಷ 6.85 7.35

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್‌ನಲ್ಲಿ ₹2 ಕೋಟಿಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ. ಇದು 2019ರ ಏಪ್ರಿಲ್‌ 5ರಿಂದ ಜಾರಿಯಲ್ಲಿದೆ.

ಅವಧಿ ಸಾಮಾನ್ಯ ವರ್ಗ (%) ಹಿರಿಯ ನಾಗರಿಕರು (%)
1 ವರ್ಷ 6.75 7.25
1–2 ವರ್ಷ 6.60 7.10
2–3 ವರ್ಷ 6.60 7.10
3–5 ವರ್ಷ 6.00 6.50

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್‌ನಲ್ಲಿ₹2 ಕೋಟಿಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ. ಇದು 2019ರ ಮಾರ್ಚ್‌ 7ರಿಂದ ಜಾರಿಯಲ್ಲಿದೆ.

ಅವಧಿ ಸಾಮಾನ್ಯ ವರ್ಗ (%) ಹಿರಿಯ ನಾಗರಿಕರು(%)
1 ವರ್ಷದಿಂದ 389 ದಿನಗಳವರೆಗೆ 6.9 7.4
390 ದಿನಗಳಿಂದ 2 ವರ್ಷವರೆಗೆ 7.1 7.6
2–3 ವರ್ಷ 7.5 8
3–5 ವರ್ಷ 7.25 7.75
5–10 ವರ್ಷ 7 7.5
5 ವರ್ಷದ ತೆರಿಗೆ ಉಳಿಕೆ ಎಫ್‌ಡಿ (ಗರಿಷ್ಠ ₹1.50 ಲಕ್ಷ) 7.25 7.75

ಕರ್ನಾಟಕ ಬ್ಯಾಂಕ್

2019ರ ಏಪ್ರಿಲ್ 30ರಿಂದ ಜಾರಿಯಲ್ಲಿರುವ ಪ್ರಕಾರ, ₹2 ಕೋಟಿವರೆಗಿನನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ (ಹಿರಿಯ ನಾಗರಿಕರಿಗೆ ₹5 ಕೋಟಿವರೆಗಿನ ನಿಶ್ಚಿತ ಠೇವಣಿ ಬಡ್ಡಿ ದರ).

ಅವಧಿ ಸಾಮಾನ್ಯ ವರ್ಗ (%) ಹಿರಿಯ ನಾಗರಿಕರು(%)
91 – 364 ದಿನಗಳವರೆಗೆ 6.50 7.00
1–2 ವರ್ಷ 7.30 7.80
2–5 ವರ್ಷ 7.00 7.50
5–10 6.50 7.00

ಎಚ್‌ಡಿಎಫ್‌ಸಿ ಬ್ಯಾಂಕ್

2019ರ ಏಪ್ರಿಲ್‌11ರಿಂದ ಜಾರಿಯಲ್ಲಿರುವಂತೆ ₹2 ಕೋಟಿವರೆಗಿನ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ.

ಅವಧಿ ಸಾಮಾನ್ಯ ವರ್ಗ (%) ಹಿರಿಯ ನಾಗರಿಕರು(%)
1 ವರ್ಷ 7.30 7.80
1–2 ವರ್ಷ 7.30 7.80
2–3 ವರ್ಷ 7.40 7.90
3–5 ವರ್ಷ 7.25 7.75
5–8 ವರ್ಷ 6.50 7.00
8–10 ವರ್ಷ 6.50 7.00

ಅಂಚೆ ಕಚೇರಿ ಉಳಿತಾಯ ಯೋಜನೆ

2019ರ ಜನವರಿ 1ರಿಂದ ಜಾರಿಯಲ್ಲಿರುವನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ವಿವರ (ಕನಿಷ್ಠ ₹200, ಗರಿಷ್ಠ ಮಿತಿ ನಿಗದಿಪಡಿಸಿಲ್ಲ).

ಅವಧಿ ಬಡ್ಡಿ ದರ (%)
1 ವರ್ಷ 7.00
2 ವರ್ಷ 7.00
3 ವರ್ಷ 7.00
5 ವರ್ಷ 7.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT