ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್ ಡೇ: 5ಜಿ ಫೋನ್‌ಗಳ ಖರೀದಿಗೆ ವಿನಿಮಯ ರಿಯಾಯಿತಿ

Published 12 ಅಕ್ಟೋಬರ್ 2023, 9:12 IST
Last Updated 12 ಅಕ್ಟೋಬರ್ 2023, 9:12 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬ್ರಾಂಡ್‌ಗಳ 5ಜಿ ಸಾಮರ್ಥ್ಯದ ಹೊಸ ಸ್ಮಾರ್ಟ್‌ ಫೋನ್‌ ಖರೀದಿ ಸಂದರ್ಭದಲ್ಲಿ ಬಳಕೆಗೆ ಯೋಗ್ಯವಲ್ಲದ ಫೋನುಗಳನ್ನು ವಿನಿಮಯ ಯೋಜನೆಯಡಿ ಹೆಚ್ಚುವರಿ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ಘೊಷಿಸಿದೆ.

ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್ ಡೇ ರಿಯಾಯಿತಿ ಮೇಳದಲ್ಲಿ ಮೊಟೊರೊಲಾ ಎಡ್ಜ್‌ 40, ವಿವೊ ಟಿ3 ಪ್ರೊ, ರಿಯಲ್ ಮಿ 11 ಪ್ರೊ. ರೆಡ್‌ ಮಿ ನೋಟ್‌ 12 ಪ್ರೊನಂತ ಹಲವು ಸ್ಮಾರ್ಟ್‌ಫೋನ್‌ಗಳು ಈ ಯೋಜನೆಯಡಿ ಲಭ್ಯ. ಇವುಗಳೊಂದಿಗೆ ಪೊಕೊ ಎಂ6 ಪ್ರೊ 5ಜಿ, ವಿವೊ ಟಿ2X 5ಜಿ, ಸ್ಯಾಮ್ಸಂಗ್ ಗೆಲಾಕ್ಸಿ ಎಫ್14 5 ಜಿ, ರಿಯಲ್ ಮಿ 11X 5ಜಿ ಮತ್ತು ಮೊಟರೊಲಾ ಜಿ54 5ಜಿಯಂತ ಫೋನುಗಳೂ ಸೇರಿವೆ. ಆ್ಯಪಲ್ ಐಫೋನ್‌, ಗೂಗಲ್ ಪಿಕ್ಸೆಲ್‌ ಫೋನುಗಳೂ ರಿಯಾಯಿತಿ ಬೆಲೆಗೆ ಲಭ್ಯ. 

ಬಜಾಜ್ ಫಿನ್‌ ಸರ್ವ್‌, ಹೆಚ್ಚುವರಿ ಶುಲ್ಕವಿಲ್ಲದೆ ಇಎಂಐ, ಫ್ಲಿಪ್‌ ಕಾರ್ಟ್ ಪೇ ಲೇಟರ್ ಮೂಲಕ ಬ್ಯಾಂಕ್ ಕಾರ್ಡ್‌ ಇಲ್ಲದೆ ₹1 ಲಕ್ಷವರೆಗೂ ಸಾಲ ಪಡೆಯುವ ಅವಕಾಶವನ್ನು ಫ್ಲಿಪ್‌ಕಾರ್ಟ್ ನೀಡಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT