ಶುಕ್ರವಾರ, ಅಕ್ಟೋಬರ್ 22, 2021
29 °C

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್: ಪ್ರತಿ ಸೆಕೆಂಡ್‌ಗೆ 2 ವಾಚ್ ಮಾರಾಟ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Flipkart India

ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್, ವಾರ್ಷಿಕ ಬಿಗ್ ಬಿಲಿಯನ್ ಡೇ ಸೇಲ್ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 2ರಿಂದ ಆರಂಭವಾದ ಬಿಗ್ ಬಿಲಿಯನ್ ಡೇ ಆಫರ್ ಸೇಲ್, ಅ. 10ರವರೆಗೆ ನಡೆದಿತ್ತು. ಈ ಅವಧಿಯಲ್ಲಿ ದುಬೈನ ಬುರ್ಜ್ ಖಲೀಫಾ ಕಟ್ಟಡದ ಎತ್ತರಕ್ಕೆ ಹೋಲಿಕೆ ಮಾಡಿ, ಸೇಲ್ ಆಗಿರುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿದೆ.

1,000 ಬುರ್ಜ್ ಖಲೀಫಾಗಳ ಎತ್ತರಕ್ಕೆ ಸಮನಾದ ಸಂಖ್ಯೆಯಷ್ಟು ಸ್ಮಾರ್ಟ್‌ಫೋನ್‌ಗಳನ್ನು ಸೇಲ್‌ ಅವಧಿಯಲ್ಲಿ ಮಾರಾಟ ಮಾಡಿದ್ದೇವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಅಲ್ಲದೆ, ಪ್ರತಿ ಸೆಕೆಂಡ್‌ಗೆ ಎರಡರಂತೆ ವಾಚ್‌ಗಳು ಮಾರಾಟವಾಗಿವೆ.

ಜತೆಗೆ 100 ಮೌಂಟ್ ಎವರೆಸ್ಟ್‌ಗಳ ಎತ್ತರಕ್ಕೆ ಸಮನಾದ ಸಂಖ್ಯೆಯಲ್ಲಿ, ಮಾರಾಟವಾದ ಫುಟ್‌ವೇರ್ ಬಾಕ್ಸ್‌ಗಳನ್ನು ಜೋಡಿಸಬಹುದು!

ಮಾರಾಟವಾದ ಬೆಡ್ ಸಂಖ್ಯೆಯನ್ನು ಹೋಲಿಸಿದರೆ, 25 ಫುಟ್‌ಬಾಲ್ ಫೀಲ್ಡ್ ಅನ್ನು ತುಂಬಿಸಬಹುದು, ಅಲ್ಲದೆ, ವಾಂಖೆಡೆ ಸ್ಟೇಡಿಯಂನಲ್ಲಿರುವಷ್ಟು ಆಸನ ಸಾಮರ್ಥ್ಯಕ್ಕೆ ಸಮನಾಗಿ ಸೋಫಾ ಮಾರಾಟವಾಗಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು