ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಎಂಸಿಜಿ: ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ

Published 6 ಜುಲೈ 2024, 15:16 IST
Last Updated 6 ಜುಲೈ 2024, 15:16 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): 2024–25ನೇ ಆರ್ಥಿಕ ವರ್ಷದಲ್ಲಿ ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಲಯದ ವರಮಾನವು ಶೇ 7ರಿಂದ 9ರಷ್ಟು ಬೆಳವಣಿಗೆ ಕಾಣಲಿದೆ ಎಂದು ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ತಿಳಿಸಿದೆ.

ನಗರ ಪ್ರದೇಶದಲ್ಲಿನ ಬೇಡಿಕೆ ಸ್ಥಿರವಾಗಿರಲಿದೆ. ಗ್ರಾಮೀಣ ವಲಯದಲ್ಲಿ ಬೇಡಿಕೆ ಪ್ರಮಾಣವು ಹೆಚ್ಚಳವಾಗಲಿದೆ. ಇದು ಎಫ್‌ಎಂಸಿಜಿ ವಲಯದ ಪ್ರಗತಿಗೆ ನೆರವಾಗಲಿದೆ ಎಂದು ಶನಿವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

2023–24ನೇ ಆರ್ಥಿಕ ವರ್ಷದಲ್ಲಿ ಈ ವಲಯದ ಬೆಳವಣಿಗೆಯು ಶೇ 5ರಿಂದ 7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿತ್ತು.‌

ಆಹಾರ ಮತ್ತು ಬೆವರೇಜಸ್‌ ವಲಯದಲ್ಲಿನ ಕಚ್ಚಾ ಸರಕುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ವೈಯಕ್ತಿಕ ಮತ್ತು ಗೃಹ ಬಳಕೆಯ ಕಚ್ಚಾ ವಸ್ತುಗಳ ಬೆಲೆಯು ಸ್ಥಿರವಾಗಿರಲಿದೆ ಎಂದು ತಿಳಿಸಿದೆ. 

‘ಉತ್ಪನ್ನ ವಿಭಾಗಗಳು ಮತ್ತು ಕಂಪನಿವಾರು ಆದಾಯದ ಬೆಳವಣಿಗೆಯಲ್ಲಿ ಬದಲಾವಣೆಯಾಗಲಿದೆ. ಆಹಾರ ಮತ್ತು ಬೆವರೇಜಸ್‌ ವಲಯವು ಶೇ 8ರಿಂದ 9ರಷ್ಟು ‍ಪ್ರಗತಿ ದಾಖಲಿಸುವ ನಿರೀಕ್ಷೆಯಿದೆ. ಗ್ರಾಮೀಣ ಪ್ರದೇಶದಲ್ಲಿನ ಬಳಕೆ ಪ್ರಮಾಣದ ಹೆಚ್ಚಳವು ಇದಕ್ಕೆ ಸಹಕಾರಿಯಾಗಲಿದೆ’ ಎಂದು ಕ್ರಿಸಿಲ್ ನಿರ್ದೇಶಕ ರವೀಂದ್ರ ವರ್ಮಾ ತಿಳಿಸಿದ್ದಾರೆ.

‘ವೈಯಕ್ತಿಕ ಬಳಕೆ ವಸ್ತುಗಳ ವಲಯವು ಶೇ 6ರಿಂದ ಶೇ 7ರಷ್ಟು ಹಾಗೂ ಗೃಹ ಬಳಕೆ ವಸ್ತುಗಳ ವಲಯವು ಶೇ 8ರಿಂದ ಶೇ 9ರಷ್ಟು ಬೆಳವಣಿಗೆ ಕಾಣಲಿದೆ’ ಎಂದು ಹೇಳಿದ್ದಾರೆ.

ಗ್ರಾಮೀಣ ಆರ್ಥಿಕತೆಯು ಮುಂಗಾರು ಹಾಗೂ ಕೃಷಿ ಆದಾಯದ ಮೇಲೆ ಅವಲಂಬಿತವಾಗಿದೆ. ಈ ಆರ್ಥಿಕತೆಯು ಸುಧಾರಣೆಯಾದರೆ ಸ್ಥಿರವಾದ ಬೇಡಿಕೆ ಸೃಷ್ಟಿಸಲಿದೆ ಎಂದು ವರದಿ ತಿಳಿಸಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT