ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಷೇರುಗಳ ಮೇಲೆ ದಾಖಲೆಯ ₹ 62,016 ಕೋಟಿ ಹೂಡಿಕೆ

Last Updated 3 ಜನವರಿ 2021, 14:19 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಡಿಸೆಂಬರ್‌ನಲ್ಲಿ ದೇಶದ ಮಾರುಕಟ್ಟೆಯಲ್ಲಿ ₹ 68,558 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಸತತ ಮೂರನೇ ತಿಂಗಳಿನಲ್ಲಿಯೂ ಅವರು ಖರೀದಿಗೆ ಗಮನ ನೀಡಿದಂತಾಗಿದೆ.

ಡಿಸೆಂಬರ್‌ನಲ್ಲಿ ₹ 62,016 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಸಾಲಪತ್ರಗಳ ಖರೀದಿಗೆ ₹6,542 ಕೋಟಿ ಹೂಡಿಕೆ ಮಾಡಿದ್ದಾರೆ. ಎಫ್‌ಪಿಐ ಹೂಡಿಕೆಯ ಮಾಹಿತಿ ಸಂಗ್ರಹಿಸಲು ಆರಂಭಿಸಿದ ನಂತರ ಆಗಿರುವ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ ಎಂದು ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ತಿಳಿಸಿದೆ.

ನವೆಂಬರ್‌ನಲ್ಲಿ ಮಾಡಿದ್ದ ₹ 60,358 ಕೋಟಿ ಹೂಡಿಕೆಯು ಎರಡನೇ ಅತಿದೊಡ್ಡ ಮೊತ್ತವಾಗಿದೆ. ‘ಸ್ಮಾಲ್‌ ಕ್ಯಾಪ್ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳು ಹೂಡಿಕೆ ಆಕರ್ಷಿಸುತ್ತಿರುವುದರಿಂದ ವಿದೇಶಿ ಹೂಡಿಕೆದಾರರು ಕೆಲವು ದೊಡ್ಡ ಕಂಪನಿಗಳ ಷೇರುಗಳನ್ನು ಬಿಟ್ಟು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಗ್ರೋವ್‌ ಸಂಸ್ಥೆಯ ಸಹ ಸ್ಥಾಪಕ ಹರ್ಷ್‌ ಜೈನ್‌ ಹೇಳಿದ್ದಾರೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಒಳಹರಿವು ಆಗುತ್ತಿರುವುದು ಮಾರುಕಟ್ಟೆಯ ಏರುಮುಖ ಚಲನೆಗೆ ಕಾರಣವಾಗಿದೆ. ಐದು ವರ್ಷಗಳಲ್ಲಿಈ ಪ್ರಮಾಣದಲ್ಲಿ ಬಂಡವಾಳ ಒಳಹರಿವು ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಹೂಡಿಕೆ ವಿವರ (ಕೋಟಿಗಳಲ್ಲಿ)

ಅಕ್ಟೋಬರ್‌;₹ 22,033

ನವೆಂಬರ್‌;₹ 62,951

ಡಿಸೆಂಬರ್‌;₹ 68,558

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT