ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿ: ದುರ್ವರ್ತನೆಗೆ ಅವಕಾಶ ಇಲ್ಲ: ಸಚಿವ ಅನುರಾಗ್‌ ಠಾಕೂರ್‌

ಸಂಸತ್‌ನಲ್ಲಿ ಆರ್ಥಿಕ ವಿಚಾರ
Last Updated 2 ಜುಲೈ 2019, 16:47 IST
ಅಕ್ಷರ ಗಾತ್ರ

ನವದೆಹಲಿ: ‘ಒತ್ತಾಯದಿಂದ ಸಾಲ ವಸೂಲಿ ಮಾಡಲು ಬಾಡಿಗೆ ಬಂಟರನ್ನು (ಬೌನ್ಸರ್‌) ನೇಮಕ ಮಾಡಿಕೊಳ್ಳುವ ಅಧಿಕಾರ ಯಾವುದೇ ಬ್ಯಾಂಕ್‌ಗೆ ಇಲ್ಲ’ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಅವರು ಉತ್ತರ ನೀಡುತ್ತಿದ್ದರು.

ಸಾಲ ವಸೂಲಾತಿಯಲ್ಲಿ ಅನಗತ್ಯ ಕಿರುಕುಳ ನೀಡುವುದು, ಒರಟುತನ ತೋರುವುದು, ತೋಳ್ಬಲ ಬಳಸಿ ಸಾಲಗಾರರನ್ನು ಬೆದರಿಸುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸುತ್ತೋಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.

ಪೊಲೀಸ್‌ ದೃಢೀಕರಣ ಮತ್ತು ಇತರ ಕೆಲ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರವೇ ಸಾಲ ವಸೂಲಾತಿ ಏಜೆಂಟರನ್ನು ನೇಮಿಸಿಕೊಳ್ಳಲು ಸ್ಪಷ್ಟ ನಿರ್ದೇಶನ ಇದೆ. ಸಾಲ ವಸೂಲಿ ಏಜೆಂಟರು ಸಾಲಗಾರರ ಜತೆ ಒರಟಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.

‘ಆರ್‌ಬಿಐನ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಆಗಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇಂತಹ ಪ್ರಕರಣಗಳಲ್ಲಿ ಬ್ಯಾಂಕ್‌ನ ಸಾಲ ವಸೂಲಿ ಏಜೆಂಟರ ಮೇಲೆ ಆರ್‌ಬಿಐ ನಿಷೇಧ ಹೇರಬಹುದಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT