ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯೂಚರ್ ಗ್ರೂಪ್–ರಿಲಯನ್ಸ್‌ ಒಪ್ಪಂದ: ಸುಪ್ರೀಂನಲ್ಲಿ ಅಮೆಜಾನ್‌ ಪರ ತೀರ್ಪು

Last Updated 6 ಆಗಸ್ಟ್ 2021, 6:18 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ಗೆ 340 ಕೋಟಿ ಡಾಲರ್ ಮೌಲ್ಯದ ಸ್ವತ್ತುಗಳ ಮಾರಾಟ ಮಾಡಲು ಫ್ಯೂಚರ್‌ ಗ್ರೂಪ್‌ ಮಾಡಿಕೊಂಡಿದ್ದ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದೆ. ಒಪ್ಪಂದ ಪ್ರಶ್ನಿಸಿ ಫ್ಯೂಚರ್‌ ಗ್ರೂಪ್‌ ಪಾಲುದಾರ ಕಂಪನಿ ಅಮೆಜಾನ್ ಡಾಟ್‌ ಕಾಂ ಐಎನ್‌ಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಪ್ರಪಂಚದ ಇಬ್ಬರು ಶ್ರೀಮಂತ ವ್ಯಕ್ತಿಗಳಾದ ಅಮೆಜಾನ್‌ನ ಜೆಫ್‌ ಬೆಜೋಸ್ ಮತ್ತು ರಿಲಯನ್ಸ್‌ನ ಮುಕೇಶ್ ಅಂಬಾನಿಗೆ ಸಂಬಂಧಿಸಿದ ಈ ತೀರ್ಪು ದೇಶದ ಶಾಪಿಂಗ್ ವಲಯದ ಮೇಲೆ ಪರಿಣಾಮ ಬೀರಲಿದೆ. ದೇಶದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ರಿಲಯನ್ಸ್ ಪ್ರಾಬಲ್ಯವನ್ನು ಅಮೆಜಾನ್‌ ಕುಗ್ಗಿಸಲಿದೆಯೇ ಎಂಬ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ರಿಲಯನ್ಸ್‌ಗೆ ಸ್ವತ್ತುಗಳನ್ನು ಮಾರಾಟ ಮಾಡಲು ಮುಂದಾಗುವ ಮೂಲಕ ಭಾರತದ ಪಾಲುದಾರ ಕಂಪನಿಯು ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ಆರೋಪಿಸಿತ್ತು. ಆದರೆ, ರಿಲಯನ್ಸ್ ಜತೆಗಿನ ಒಪ್ಪಂದದಲ್ಲಿ ನಿಯಮ ಉಲ್ಲಂಘಿಸಿಲ್ಲ ಎಂದು ಫ್ಯೂಚರ್ ಗ್ರೂಪ್ ಸಮರ್ಥಿಸಿಕೊಂಡಿತ್ತು.

ಅಮೆಜಾನ್ ವ್ಯಕ್ತಪಡಿಸಿರುವ ಆಕ್ಷೇಪಗಳು ಅರ್ಹ ಎಂದು ಪರಿಗಣಿಸಿದ ಕಾರಣ ಫ್ಯೂಚರ್‌ ಗ್ರೂಪ್‌ ಮತ್ತು ರಿಲಯನ್ಸ್ ನಡುವಣ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT