ಶುಕ್ರವಾರ, ಅಕ್ಟೋಬರ್ 7, 2022
28 °C

ಫೋಬ್ಸ್‌ ಶ್ರೀಮಂತರ ಪಟ್ಟಿ: ಇಲಾನ್ ಮಸ್ಕ್ ನಂಬರ್‌ 1, ಅದಾನಿಗೆ 4ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೋಬ್ಸ್ ನಿಯತಕಾಲಿಕೆ ಸಿದ್ಧಪಡಿಸುವ, ವಿಶ್ವದ ಶತಕೋಟ್ಯಧೀಶರ ಪಟ್ಟಿಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ನಾಲ್ಕನೆಯ ಸ್ಥಾನಕ್ಕೆ ಏರಿದ್ದಾರೆ.

ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಇಲಾನ್ ಮಸ್ಕ್ (ಟೆಸ್ಲಾ ಕಂಪನಿಯ ಸಿಇಒ), ಬರ್ನಾರ್ಡ್ ಅರ್ನಾಲ್ಟ್ ಕುಟುಂಬ ಮತ್ತು ಜೆಫ್ ಬೆಜಾಸ್ (ಅಮೆಜಾನ್ ಮುಖ್ಯಸ್ಥ) ಇದ್ದಾರೆ. ನಾಲ್ಕನೆಯ ಸ್ಥಾನದಲ್ಲಿ ಇದ್ದ ಬಿಲ್ ಗೇಟ್ಸ್ ಅವರು ಐದನೆಯ ಸ್ಥಾನಕ್ಕೆ ಕುಸಿದಿದ್ದಾರೆ.

ಉದ್ಯಮಿಗಳು ಹೊಂದಿರುವ ಷೇರು ಮೌಲ್ಯದ ಏರಿಳಿತವನ್ನು ಆಧರಿಸಿ ಫೋಬ್ಸ್ ನಿಯತಕಾಲಿಕೆಯು ಈ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಷೇರು ಮೌಲ್ಯ ಆಧರಿಸಿ ಉದ್ಯಮಿಗಳ ಸಂಪತ್ತಿನ ಮೌಲ್ಯ ಬದಲಾದಂತೆ, ಅವರ ಸ್ಥಾನವೂ ಬದಲಾಗುವುದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು